ದ್ವಿಚಕ್ರ ವಾಹನ ಸವಾರರ ಪ್ರಯಾಣ ಸುಖಕರವಾಗಿಸಲು ಇಲ್ಲಿದೆ ಬೆಸ್ಟ್ ಆಕ್ಸೆಸರಿಗಳು..!

09 Mar 2018 6:29 PM | Technology
621 Report

ಸುರಕ್ಷಿತ ಬೈಕ್ ಸವಾರಿ ಮುಖ್ಯ ವಿಚಾರವಾಗಿದ್ದು, ಬೈಕ್ ಸವಾರರು ಈ ಕೆಳಗಿನ ಅಗತ್ಯ ಆಕ್ಸೆಸರಿಗಳನ್ನು ಹೊಂದಿದಲ್ಲಿ ನಿಮ್ಮ ಪ್ರಯಾಣ ಸುಖಕವಾಗಿರಲಿದೆ ಎನ್ನುವುದು ನಮ್ಮ ಭಾವನೆ. ಸಾಮಾನ್ಯವಾಗಿ ದ್ವಿಚಕ್ರ ವಾಹನ ಚಲಿಸುವಾಗ ಸವಾರು ಹಲವಾರು ಸಮಸ್ಯೆಗಳನ್ನು ಎದುರಿಸುವುದು ನಮಗೆಲ್ಲಾ ಗೊತ್ತಿರುವ ವಿಚಾರ.

ಅದಕ್ಕಾಗಿಯೇ ಇಲ್ಲಿದೆ ಕೆಲವು ಮಾಹಿತಿಗಳು ಬೈಕ್‍‍ನಲ್ಲಿ ದೂರದ ಸ್ಥಳಕ್ಕೆ ಹೋದಾಗ ಕೆಲವೊಮ್ಮೆ ದಾರಿ ತಿಳಿಯದೆ ಪದೇ ಪದೇ ರಸ್ತೆ ಮಧ್ಯೆದಲ್ಲೇ ನಿಲ್ಲಿಸಿ ನ್ಯಾವಿಗೆಷನ್ ಮ್ಯಾಪ್‍‌ನಲ್ಲಿ ದಾರಿ ಹುಡುಕ್ಕುತ್ತಾ ಹೋಗುವುದು ಬೆಂಗಳೂರಿನಂತಹ ಟ್ರಾಫಿಕ್ ಹೆಚ್ಚಿರುವ ನಗರಗಳಲ್ಲಿ ಕಷ್ಟವೇ ಸರಿ. ಅದಕ್ಕಾಗಿಯೇ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಈ 'ವಾಟರ್ ಪ್ರೂಫ್ ಫೋನ್ ಹೋಲ್ಡರ್' ಇದರ ಸಹಾಯದಿಂದ ನ್ಯಾವಿಗೆಷನ್ ಆನ್ ಮಾಡಿ ವಾಹನ ಚಲಿಸುವಾಗ ನೀವು ಸೇರಬೇಕಾದ ಸ್ಥಳವನ್ನು ಅತಿಕಡಿಮೆ ಸಯಯದಲ್ಲಿ ಸುರಕ್ಷಿತವಾಗಿ ಸೇರಬಹುದಾಗಿದೆ. ಮಾರುಕಟ್ಟೆಯಲ್ಲಿ ಹಲವಾರು ಇನ್-ಬಿಲ್ಟ್ ಚಾರ್ಜಿಂಗ್ ಆಯ್ಕೆಯಿರುವ ದ್ವಿಚಕ್ರ ವಾಹನಗಳು ಲಭ್ಯವಿದ್ದರೂ ಇನ್ನು ಮುಂಬರುವ ದ್ವಿಚಕ್ರ ವಾಹನಗಳಿಗೆ ಈ ಆಕೆಯನ್ನು ನೀಡಬೇಕಾಗಿದೆ. ನೀವು ನ್ಯಾವಿಗೆಷನ್ ಬಳಸುವಾಗ ನಿಮ್ಮ ಫೋನಿನ ಬ್ಯಾಟರಿ ಬೇಗ ಖಾಲಿಯಾಗುವ ಸಾಧ್ಯತೆಗಳಿರುತ್ತವೆ.

ಆದ್ದರಿಂದ ಈ ಫೋನ್ ಚಾರ್ಜರ್ ನಿಮ್ಮ ವಾಹನದಲ್ಲಿ ಇರಿಸಿಕೊಳ್ಳುವುದರಿಂದ ನಿಮ್ಮ ಫೋನ್‍ ಅನ್ನು ವಾಹನ ಚಾಲನೆ ಮಾಡುತ್ತಲೇ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಗೆಳೆಯರ ಗುಂಪಿನೊಂದಿಗೆ ಧೀರ್ಘಕಾಲದ ರೈಡಿಂಗ್ ಹೋಗುವ ಸಮಯದಲ್ಲಿ ನಿಮಗೆ ಹತ್ತಿರವಾದ ಕರೆ ಬಂದಾಗ ರೈಡಿಂಗ್ ಮಾಡುವಾಗಲೇ ಮಾತನಾಡಲು ಈ ಬ್ಲೂಟೂತ್ ಹೆಡ್‍‍ಸೆಟ್ ಸಹಾಯಕ್ಕೆ ಬರಲಿದೆ. ನಿಮ್ಮ ರೈಡಿಂಗ್ ಶೈಲಿಯನ್ನು ಸೆರೆಹಿಡಿಯಲು  ಹಲವಾರು ಆಕ್ಷನ್ ಕ್ಯಾಮೆರಾಗಳು ಲಭ್ಯವಿದ್ದು, ಇದನ್ನು ಖರೀದಿಸಿದ ನಂತರ ನಿಮ್ಮ ರೈಡಿಂಗ್‌ನ ಪ್ರತಿಕ್ಷಣವನ್ನು ಸೆರೆಹಿಡಿಯಬಹುದಾಗಿದೆ. ಬೇಸಿಗೆಯ ಸಮಯದಲ್ಲಿ ಮುಖಭಾಗ ಪೂರ್ಣ ಕವರ್ ಆಗುವಂತಹ ಹೆಲ್ಮೆಟ್‍‍ಗಳನ್ನು ಧರಿಸಿದಾಗ ಬೆಸರು ಸಹಜವಾಗಿರುತ್ತದೆ. ಇದರಿಂದ ಮುಕ್ತಿಪಡೆಯಲು ಮಾರುಕಟ್ಟೆಯಲ್ಲಿ ಹೊಸ ರೀತಿಯಾದ ಉತ್ಪನ್ನಗಳು ಲಭ್ಯವಿದ್ದು, ಹೆಲ್ಮೆಟ್ ಕೂಲರ್ ಇದಕ್ಕೆ ಪರಿಹಾರವಾಗಲಿದೆ.

 

 

Edited By

Shruthi G

Reported By

Madhu shree

Comments