ಜನಸಾಮಾನ್ಯರ ಸ್ಮಾರ್ಟ್ ಟಿವಿಗಿಂತ Mi TV 4A ಬೆಸ್ಟ್ ಯಾಕೆ..?
ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಶಕೆಯನ್ನು ಆರಂಭಿಸಿದ ಚೀನಾ ಮೂಲದ ಶಿಯೋಮಿ, ಭಾರತೀಯರ ನಂಬಿಕೆಯನ್ನು ಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಇಷ್ಟು ದಿನ ಚೀನಾದಲ್ಲಿ ಮಾತ್ರವೇ ಮಾರಾಟ ಮಾಡುತ್ತಿದ್ದ Mi TVಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ.
ಅದರಲ್ಲೂ ಭಾರತೀಯ ಆರ್ಥಿಕ ಸ್ಥಿತಿಗತಿಯನ್ನು ನೋಡಿಕೊಂಡು ಬೆಜೆಟ್ ಬೆಲೆಯಲ್ಲಿ ಟಿವಿಯನ್ನು ಮಾರಾಟ ಮಾಡುತ್ತಿದೆ. ನಮ್ಮ ಮನೆಗೂ ಹೊಸ ಟಿವಿ ಬೇಕು, ಸ್ಲಿಮ್ ಆಗಿರಬೇಕು, ಸ್ಮಾರ್ಟ್ ಆಗಿರಬೇಕು ಮತ್ತು ಬೆಲೆಯೂ ನಮ್ಮ ಬಜೆಟ್ ನಲ್ಲಿಯೇ ಇರಬೇಕು ಎನ್ನುವವರಿಗೆ ಶಿಯೋಮಿ ಬಿಡುಗಡೆ ಮಾಡಿರುವ Mi TV 4A ಸ್ಮಾರ್ಟ್ ಟಿವಿ ಹೇಳಿ ಮಾಡಿಸಿದ ಹಾಗಿದೆ. ನೀವು ಕೊಡುವ ಬೆಲೆಗೆ ಎಂದಿಗೂ ಶಿಯೋಮಿ ಮೋಸ ಮಾಡುವುದಿಲ್ಲ. ಈ ಸ್ಮಾರ್ಟ್ ಟಿವಿ ಸಹ ಅತೀ ಹೆಚ್ಚು ವಿಶೇಷತೆಗಳೊಂದಿಗೆ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಬೆಲೆಗೆ ಇನ್ಯಾವುದೇ ಟಿವಿ ದೊರೆಯುವುದಿಲ್ಲ ಎನ್ನಬಹುದಾಗಿದೆ. ಶಿಯೋಮಿ ಮಾರುಕಟ್ಟೆಗೆ ಎರಡು ಬಜೆಟ್ ಟಿವಿಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವನ್ನು ನೀಡಿದೆ. 32 ಇಂಚಿನ Mi TV 4A ಟಿವಿಯಲ್ಲಿ ಬಳಕೆದಾರರಿಗೆ HD ರೆಡಿ ಡಿಸ್ಪ್ಲೇ ದೊರೆತರೆ. 43 ಇಂಚಿನ Mi TV 4 ಟಿವಿಯಲ್ಲಿ FHD ಡಿಸ್ಪ್ಲೇಯನ್ನು ಕಾಣಬಹುದಾಗಿದೆ. ನೀವು ಬಜೆಟ್ ಅನುಗುಣವಾಗಿ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ.
Comments