ಆಂಡ್ರಾಯ್ಡ್ ಬಳಕೆದಾರರಿಗೆ ಗುಡ್ ನ್ಯೂಸ್

08 Mar 2018 11:33 AM | Technology
453 Report

ಮಾರುಕಟ್ಟೆಯಲ್ಲಿ ಶೀಘ್ರವೇ ಆಂಡ್ರಾಯ್ಡ್ P ಕಾಣಿಸಿಕೊಳ್ಳಲಿದ್ದು, ಗೂಗಲ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸದನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಆಂಡ್ರಾಯ್ಡ್ P ನಲ್ಲಿ ಸಾಕಷ್ಟು ಹೊಸತನಗಳನ್ನು ನೀಡಲು ಮುಂದಾಗಿದೆ. ಆಪಲ್ ಮೀರಿಸುವ ಆಯ್ಕೆಗಳನ್ನು ಅಳವಡಿಸಲು ಯೋಜನೆಯನ್ನು ರೂಪಿಸಿದೆ.

ಈಗಾಗಲೇ ಸದ್ದು ಮಾಡುತ್ತಿರುವ ಆಂಡ್ರಾಯ್ಡ್ ಒರಿಯೋವನ್ನು ಮೀರಿಸುವ ಆಯ್ಕೆಗಳನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ಆಂಡ್ರಾಯ್ಡ್ P ನಲ್ಲಿ ಇರುವ ಆಯ್ಕೆಗಳ ಕುರಿತು ಚರ್ಚೆಯೂ ಶುರುವಾಗಿದ್ದು, ಮೂಲಗಳ ಪ್ರಕಾರ, ಆಂಡ್ರಾಯ್ಡ್ P ನಲ್ಲಿ ನಿಮ್ಮ ಸ್ಮಾರ್ಟ್ಫೋನ್ ಅನ್ನು ಬ್ಲೂಟೂತ್ ಕಿಬೋರ್ಡ್ ಮತ್ತು ಮೌಸ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಈ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನೀವು ಕಂಪ್ಯೂಟರ್ ನಿಯಂತ್ರಿಸಬಹುದಾಗಿದೆ.

ರೂಮರ್ಗಳು: ಆಂಡ್ರಾಯ್ಡ್ P ಕುರಿತಂತೆ ಸಾಕಷ್ಟು ರೂಮರ್ ಗಳು ಕೇಳಿ ಬರುತ್ತಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಈ ಆವೃತ್ತಿಯೂ, ಹಿಂದಿನ ಆವೃತ್ತಿಗಳಿಗಿಂತ ತೀರಾ ಭಿನ್ನವಾಗಿರಲಿದೆ ಎನ್ನುವ ಮಾತು ಗೂಗಲ್ ಕಡೆಯಿಂದಲೇ ಕೇಳಿ ಬಂದಿದೆ. ಆಪಲ್ ಸೆಡ್ಡು ಹೊಡೆಯುವ ಸಲುವಾಗಿ ಹೊಸ ಆಯ್ಕೆಗಳನ್ನು ನೀಡಲಿದೆ.

ಸೆಕ್ಯೂರ್: ಹೆಚ್ಚಿನ ಸೆಕ್ಯೂರಿಟಿಯನ್ನು ನೀಡಲು ಗೂಗಲ್ ಮುಂದಾಗಿದ್ದು, ದಿನೇ ದಿನೇ ಪೇಮೆಂಟ್ ಪ್ರಕ್ರಿಯೆಗಳು ಸ್ಮಾರ್ಟ್ಫೋನ್ನಲ್ಲಿಯೇ ನಡೆಯುತ್ತಿರುವ ಕಾರಣದಿಂದಾಗಿ ಸ್ಮಾರ್ಟ್ಫೋನ್ ಗೆ ಮಾಲ್ವೇರ್ ದಾಳಿಯನ್ನು ತಡೆಯಲು ಫೈರ್ ವಾಲ್ಗಳನ್ನು ಉತ್ತಮಪಡಿಸುವ ಕಾರ್ಯಕ್ಕೆ ಮುಂದಾಗಿದೆ.

ಬ್ಯಾಟರಿ ಬಾಳಿಕೆ : ಸ್ಮಾರ್ಟ್ಫೋನ್ ಬಳಕೆದಾರರ ಪ್ರಮುಖ ಸಮಸ್ಯೆಯಾದ ಶೀಘ್ರ ಬ್ಯಾಟರಿ ಇಳಿಕೆಗೆ ಪರಿಹಾರವನ್ನು ನೀಡುವ ಸಲುವಾಗಿ ಮತ್ತು ಬ್ಯಾಟರಿ ಬಾಳಿಕೆಯನ್ನು ಏರಿಕೆ ಮಾಡುವ ಸಲುವಾಗಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಗೂಗಲ್ ಮುಂದಾಗಿದೆ.

ನೋಟಿಫಿಕೇಷನ್: ನೋಟಿಫಿಕೇಷನ್ ಮತ್ತು ಎಮೋಜಿಗಳನ್ನು ಆಂಡ್ರಾಯ್ಡ್ P ನಲ್ಲಿ ಹೊಸ ಮಾದರಿಯಲ್ಲಿ ನೀಡಲು ಗೂಗಲ್ ಮುಂದಾಗಿದ್ದು, ಸ್ಟಾಕ್ ಆಂಡ್ರಾಯ್ಡ್ ವಿನ್ಯಾಸದಲ್ಲಿಯೂ ಬದಲಾವಣೆಯನ್ನು ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ವರ್ಷದ ಅಂತ್ಯದಲ್ಲಿ ಲಾಂಚ್ ಆಗಲಿರುವ ಆಂಡ್ರಾಯ್ಡ್ P ಕುರಿತು ಈಗಾಗಲೇ ಚರ್ಚೆ ಶುರುವಾಗಿದೆ.

 

 

Edited By

Shruthi G

Reported By

Madhu shree

Comments