ಉದ್ಯೋಗ ಹುಡುಕುತ್ತಿದ್ದಿರಾ..? ಇಲ್ಲಿದೆ ನಿಮಗೆ ಗುಡ್ ನ್ಯೂಸ್

ಇತ್ತೀಚಿಗೆ ಉದ್ಯೋಗ ಹುಡುಕುವುದು ತಲೆನೋವಾಗಿದೆ ಹೋಗಿದೆ ಅಷ್ಟಲ್ಲದೇ ಇತ್ತೀಚೆಗಿನ ಯುವಕರು ಸಾಮಾಜಿಕ ಜಾಲತಾಣಗಲ್ಲಿ ಸಕ್ರಿಯರಾಗಿರುತ್ತಾರೆ ಆದ್ರೆ ಇತರೆ ಕೆಲಸಗಳ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ . ಇಂತವರಿಗಾಗಿ ಭಾರತ ಸೇರಿದಂತೆ 40 ದೇಶಗಳಲ್ಲಿ ಫೇಸ್ಬುಕ್ ನಲ್ಲಿ ಉದ್ಯೋಗಕ್ಕಾಗಿ ಆಕಾಂಕ್ಷಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು.
ಫೇಸ್ಬುಕ್ ಜಾಬ್ ಅಪ್ಲಿಕೇಶನ್ ಫೀಚರ್ ಅನ್ನು 2017ರಲ್ಲಿ ಅಮೆರಿಕ ಮತ್ತು ಕೆನಡಾದಲ್ಲಿ ಮಾತ್ರ ಪರಿಚಯಿಸಲಾಗಿತ್ತು. ಸಣ್ಣ-ಮತ್ತು ಮಧ್ಯಮ ವರ್ಗದ ಉದ್ಯಮಿಗಳನ್ನು ಸೆಳೆಯಲು ವಿಶೇಷ ಜಾಬ್ ಅಪ್ಲಿಕೇಶನ್ ಫೀಚರ್ ಅಳವಡಿಸಿದೆ. ಈಗ ಅದನ್ನು ಒಟ್ಟು 40 ದೇಶಗಳಿಗೆ ವಿಸ್ತರಿಸಿದೆ. ಇದರಿಂದ ಹೆಚ್ಚುವರಿಯಾಗಿ ಶೇ.60ರಷ್ಟು ಉದ್ಯೋಗ ಕೂಡ ಸೃಷ್ಟಿಯಾಗಿದೆ.
ಅಮೆರಿಕದಲ್ಲಿ ಹಲವರು ಈಗಾಗ್ಲೇ ಫೇಸ್ಬುಕ್ ಮೂಲಕ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಫೇಸ್ಬುಕ್ ನಲ್ಲಿ ಜಾಬ್ ಪೋಸ್ಟಿಂಗ್ ಮಾಡಲಾಗುತ್ತದೆ. ಅದನ್ನು ಪಡೆಯಲು ಆಸಕ್ತಿಯುಳ್ಳವರು ಆನ್ ಲೈನ್ ನಲ್ಲೇ ಅರ್ಜಿ ಹಾಕಬಹುದಾಗಿದೆ. Facebook.com/job ಓಪನ್ ಮಾಡಿ. ಅದರಲ್ಲಿ ಜಾಬ್ಸ್ ಎಕ್ಸ್ ಪ್ಲೋರ್ ಆಪ್ಷನ್ ಕ್ಲಿಕ್ ಮಾಡಿ. ಅಥವಾ ಬ್ಯುಸಿನೆಸ್ ಪೇಜ್ ನ ಜಾಬ್ಸ್ ಟ್ಯಾಬ್ ಗೆ ವಿಸಿಟ್ ಮಾಡಿ. ಸಬ್ ಮಿಟ್ ಮಾಡುವ ಮುನ್ನ ನಿಮ್ಮ ಅಪ್ಲಿಕೇಶನ್ ಅನ್ನು ಎಡಿಟ್ ಕೂಡ ಮಾಡಬಹುದು.
Comments