ಚಂದದ ಚಂದ್ರನಿಗೆ 4ಜಿ ಮೊಬೈಲ್ ನೆಟ್ವರ್ಕ್!

28 Feb 2018 4:30 PM | Technology
549 Report

ನಾವು ಚಿಕ್ಕವರಿದ್ದಾಗ ಅಮ್ಮ, ಚಂದ್ರ ನನ್ನು ತೋರಿಸಿ ಊಟ ಮಾಡಿಸ್ತಿದ್ದು ನೆನೆಪಿದೆ . ಆದ್ರೆ ಮುಂದಿನ ಪೀಳಿಗೆಯವರು ಚಂದ್ರನಿಗೆ ಕರೆ ಮಾಡಿ, ಚೆಂದದ ಎಚ್ ಡಿ ಗುಣಮಟ್ಟದ ವಿಡಿಯೋ ತರೆಸಿಕೊಳ್ಳಬಹುದಾದ ಕಾಲ ದೂರವಿಲ್ಲ' ಇದೇನಪ್ಪ ಇದು ಅಂತ ಆಶ್ಚರ್ಯ ಪಡ್ತಿದೀರಾ ಇಲ್ಲಿದೆ ನೋಡಿ ಪೂರ್ತಿ ಮಾಹಿತಿ .

ಚಂದ್ರನ ಅಂಗಳದ ಮೇಲೆ 4ಜಿ ಮೊಬೈಲ್ ನೆಟ್ವರ್ಕ್ ಸ್ಥಾಪಿಸಲು ಅನುಮತಿ ಸಿಕ್ಕಿದ್ದು, ಮುಂದಿನ ವರ್ಷ ಈ ವೇಳೆಗೆ ಚಂದ್ರನಿಂದ ವಿಡಿಯೋ ನಿರೀಕ್ಷಿಸಬಹುದು. ವೋಡಾಫೋನ್, ನೋಕಿಯಾ ಹಾಗೂ ಕಾರು ಉತ್ಪಾದಕ ಸಂಸ್ಥೆ ಔಡಿ(Audi) ಸಂಸ್ಥೆ ಈ ಯೋಜನೆಯಲ್ಲಿ ಜಂಟಿಯಾಗಿ ತೊಡಗಿಕೊಂಡಿವೆ. ಜರ್ಮನಿಯ ಬರ್ಲಿನ್ ಮೂಲದ ವಿಜ್ಞಾನಿಗಳ ಕನಸಿನ ಮೂನ್ ಮಿಷನ್ ಯೋಜನೆಗೆ ಖಾಸಗಿ ಸಂಸ್ಥೆಗಳು ಹಣ ಹೂಡಿಕೆ ಮಾಡಿವೆ. ಹೀಗಾಗಿ, ಮುಂದಿನ ವರ್ಷ ಚಂದ್ರನಲ್ಲೂ ಮೊಬೈಲ್ ನೆಟ್ವರ್ಕ್ ಸಿಗಲಿದೆ. ವೊಡಾಫೋನ್ ಜರ್ಮನಿ ಈ ಗೆ ಕೈಹಾಕಿದೆ.

ನಾಸಾ ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟು 50 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಹೊಸ ಯೋಜನೆಯನ್ನು ಜಾರಿಯಲ್ಲಿದೆ. ಬರ್ಲಿನ್ ಮೂಲದ ಕಂಪನಿ ಪಿಟಿಎಸ್ ಸೈಂಟಿಸ್ಟ್ಸ್ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ರಾಬರ್ಟ್ ಬೊಹ್ಮೆ ಅವರು ಈ ಬಗ್ಗೆ ಮಾತನಾಡಿ, ಕೇಪ್ ಕ್ಯಾನವರಲ್ ನಿಂದ 2019ರಲ್ಲಿ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಇದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಮೊಟ್ಟ ಮೊದಲ ಎಚ್ ಡಿ ವಿಡಿಯೋ ಫೀಡ್ ಚಂದ್ರನಿಂದ ಭೂಮಿಗೆ ಸಿಗಲಿದ್ದು, ಬರ್ಲಿನ್ ನ ಮಿಷನ್ ಕಂಟ್ರೋಲ್ ಕೇಂದ್ರದಿಂದ ವಿಶ್ವದೆಲ್ಲೆಡೆ ಪ್ರಸಾರವಾಗಲಿದೆ. ಇದು ಟೆಲಿಕಾಂ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಯಾಗಲಿದೆ ಎಂದಿದ್ದಾರೆ.                                   

 

 

 

                                                                                                                                                                                                                                                                                                                                                                                                      &

Edited By

Shruthi G

Reported By

Madhu shree

Comments