ಫೇಸ್ ಬುಕ್ ಬಳಕೆದಾರರಿಗೆ ಗುಡ್ ನ್ಯೂಸ್
ಫೇಸ್ ಬುಕ್, ಬಳಕೆದಾರರಿಗೊಂದು ಖುಷಿ ಸುದ್ದಿ ನೀಡಿದೆ. ಸಾಮಾಜಿಕ ಜಾಲತಾಣ ಕಂಪನಿ ಫೇಸ್ ಬುಕ್ ತನ್ನ ಮೆಸೆಂಜರ್ ನಲ್ಲಿ ಹೊಸ ಫೀಚರ್ ಶುರು ಮಾಡಿದೆ. ಈ ಹೊಸ ಫೀಚರ್ ನಲ್ಲಿ ಬಳಕೆದಾರರು ವಾಯ್ಸ್ ಹಾಗೂ ವಿಡಿಯೋ ಮೂಲಕ ಒಂದಕ್ಕಿಂತ ಹೆಚ್ಚು ಜನರನ್ನು ಸಂಪರ್ಕಿಸಬಹುದಾಗಿದೆ.
ಇದೊಂದು ಚಿಕ್ಕ ಫೀಚರ್. ಆದ್ರೆ ಆಡಿಯೋ, ವಿಡಿಯೋ ಕಾಲಿಂಗ್ ಜನರಿಗೆ ಇದು ವಿಶೇಷವಾಗಿರಲಿದೆ. ಫೇಸ್ ಬುಕ್ ಬಳಕೆದಾರರು ಮೆಸೆಂಜರ್ ನಲ್ಲಿ ಬೇಗ ಚಾಟ್ ಮಾಡಲು ಈ ಫೀಚರ್ ಸಹಾಯ ಮಾಡಲಿದೆ ಎಂದು ಫೇಸ್ ಬುಕ್ ಹೇಳಿದೆ. ಒಬ್ಬರ ಜೊತೆ ಆಡಿಯೋ ಅಥವಾ ವಿಡಿಯೋ ಕಾಲಿಂಗ್ ಮಾಡುತ್ತಿರುವಾಗಲೇ ನೀವು ಇನ್ನೊಬ್ಬ ಬಳಕೆದಾರನನ್ನು ಈ ಚಾಟ್ ನಲ್ಲಿ ಸೇರಿಸಿಕೊಳ್ಳಬಹುದು. ಚಾಟ್ ಸಮಯದಲ್ಲಿ ಆಯಡ್ ಪರ್ಸನ್ ಮೇಲೆ ಕ್ಲಿಕ್ ಮಾಡಿ ನೀವು ಈ ಸೇವೆ ಪಡೆಯಬಹುದಾಗಿದೆ.
Comments