ಏಪ್ರಿಲ್ ನಲ್ಲಿ ಚಂದ್ರಯಾನ-2 ಕೈಗೊಂಡಿರುವ ಇಸ್ರೋ

ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರದಿಂದ ಗಮನ ಸೆಳೆದಿದೆ. ಇದೀಗ ಮತ್ತೊಂದು ಸಾಧನೆಯತ್ತ ಹೆಜ್ಜೆ ಹಾಕಿರುವ ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಇಸ್ರೋ ಇದೇ ವರ್ಷ ಎಪ್ರಿಲ್ ನಲ್ಲಿ ಚಂದ್ರಯಾನ-2 ಯೋಜನೆಯನ್ನು ಆರಂಭಿಸಲಿದೆ.
ಒಂದು ವೇಳೆ ಎಪ್ರಿಲ್ ನಲ್ಲಿ ಪ್ರತಿಕೂಲ ಹವಾಮಾನ ಇದ್ದ ಪಕ್ಷದಲ್ಲಿ ಚಂದ್ರಯಾನ -2 ಅಕ್ಟೋಬರ್ ನಲ್ಲಿ ಆರಂಭವಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಪ್ರಧಾನಿ ಕಾರ್ಯಾಲಯದ ಕೇಂದ್ರ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಇಲಾಖೆಯ ಸಾಧನೆಗಳನ್ನು ವಿವರಿಸಿ, "ಚಂದ್ರಯಾನ - 2 ಅತ್ಯಂತ ಗುರುತರ ಸವಾಲಿನ ಅಭಿಯಾನವಾಗಿದೆ; ಏಕೆಂದರೆ ಇದು ಮೊದಲ ಬಾರಿಗೆ ಕಕ್ಷೆಯನ್ನು ಸೇರಿಕೊಳ್ಳಲಿದ್ದು ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನಲ್ಲಿ ಇಳಿಸಲಿದೆ' ಎಂದು ಹೇಳಿದರು. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿರುವ ಡಾ. ಶಿವನ್ ಕೆ ಅವರು ಮಾತನಾಡಿ, "ಚಂದ್ರಯಾನ 2ರ ಒಟ್ಟು ಖರ್ಚು ವೆಚ್ಚ ಸುಮಾರು 800 ಕೋಟಿ ರೂ. ಆಗಲಿದೆ ಎಂದು ಹೇಳಿದರು.
Comments