ಗ್ಯಾಜೆಟ್ ವೆಬ್ಸೈಟಿನ ಈ ಕನ್ನಡಿ ಏನೆಲ್ಲಾ ಮಾಡುತ್ತೆ ಗೊತ್ತಾ..!!



ದಿನ ಬೆಳಗ್ಗೆ ಎದ್ದ ಕೂಡಲೇ ಕನ್ನಡಿ ನೋಡುವುದು ಕೆಲವರಿಗೆ ಅಭ್ಯಾಸ, ಅದರಲ್ಲೂ ಹುಡುಗಿಯರಿಗೆ ಕನ್ನಡಿ ಫ್ರೆಂಡ್ ಇದ್ದ ಹಾಗೆ ಇಂತವರಿಗಾಗಿ ಮಾರುಕಟ್ಟೆಯಲ್ಲಿ ಗ್ಯಾಜೆಟ್ ವೆಬ್ಸೈಟಿನಲ್ಲಿ ಈ ಕನ್ನಡಿಯನ್ನು ಪರಿಚಯಿಸಲಾಗಿದೆ. ಈ ಕನ್ನಡಿಯ ವಿಶೇಷಗಳ ಬಗ್ಗೆ ತಿಳಿದರೆ ನೀ ಈ ಕೂಡಲೇ ಖರೀದಿಸುತ್ತೀರಾ.
ಹೌದು, ಈಗ ಈ ಕನ್ನಡಿಯನ್ನೂ ಸ್ಮಾರ್ಟ್ ಆಗಿಸುವ ಕಾಲ ಬಂದಿದೆ. ಗ್ರಾಹಕರಿಗೆ ಸಹಾಯ ಮಾಡಲು ಸ್ಮಾರ್ಟ್ ಮಿರರ್ ಗಳು ಮಾರುಕಟ್ಟೆ ಪ್ರವೇಶಿಸಿವೆ. ಎಲ್ಲ ಕನ್ನಡಿಗಳಂತೆ ಈ ಸ್ಮಾರ್ಟ್ ಮಿರರ್ ಕೇವಲ ಪ್ರತಿಬಿಂಬ ತೋರಿಸುವುದಿಲ್ಲ, ಜತಗೆ ನಿಮ್ಮ ಮೊಗದ ಅಂದಕ್ಕೆ ಯಾವ ಬಟ್ಟೆ ಸೂಕ್ತ, ಯಾವ ಬಣ್ಣ ನಿಮಗೆ ಇನ್ನಷ್ಟು ಆಕರ್ಷಣೆ ನೀಡುತ್ತದೆ ಎಂಬೆಲ್ಲಾ ಮಾಹಿತಿ ನೀಡುತ್ತದೆ. ಯಾವ ಹೇರ್ ಕಟ್ನಲ್ಲಿ ಸುಂದರವಾಗಿ ಕಾಣುತ್ತೀನಿ.? ಮೀಸೆ, ಹೇರ್ ಸ್ಟೈಲ್ ಹೇಗೆ ಬದಲಾದರೆ ಚೆನ್ನ.? ಕಿವಿಯೋಲೆ ಹೇಗಿದ್ರೆ ನನ್ನ ಬ್ಯೂಟಿ ಹೆಚ್ಚುತ್ತದೆ.? ಜತೆಗೆ ಆರೋಗ್ಯದ ಸ್ಥಿತಿಗತಿಗಳೇನು ಎಂಬೆಲ್ಲಾ ಮಾಹಿತಿಗಳನ್ನೂ ನೀಡುತ್ತದೆ. ಹಾಗಾದರೆ, ಯಾವ ಯಾವ ಡಿಜಿಟಲ್ ಕನ್ನಡಿಗಳು ಮಾರುಕಟ್ಟೆಯಲ್ಲಿವೆ? ಅವುಗಳ ವಿಶೇದಷವೇನು ಎಂಬುದನ್ನು ಮುಂದೆ ತಿಳಿಯಿರಿ.
ಸ್ಮಾರ್ಟ್ ಮಿರರ್ ತಂತ್ರಜ್ಞಾನ : ಬಳಕೆದಾರರು ಅಪೇಕ್ಷಿಸುವ ಎಲ್ಲಾ ಆಯ್ಕೆಗಳನ್ನು ಕನ್ನಡಿಯಲ್ಲಿ ಮೂಡಿಸುವಂತೆ 'ಕೇರ್ ಒಎಸ್ (care Os)' ಅನ್ನು ಸ್ಮಾರ್ಟ್ ಮಿರರ್ನಲ್ಲಿ ಅಳವಡಿಸಲಾಗಿದೆ, ಈ 'ಕೇರ್ ಒಎಸ್ (care Os)' ಸಹಾಯದಿಂದ ಮುಖ ಗುರುತಿಸುವಿಕೆ, ಮುಖ ವಿಶ್ಲೇಷಣೆ ಎಲ್ಲವನ್ನು ಕನ್ನಡಿಯ ಮೂಲಕವೇ ಬಳಕೆದಾರರು ಪಡೆಯಬಹುದಾಗಿದೆ.!!
ಹೈಇರ್ ಮ್ಯಾಜಿಕ್ ಮಿರರ್: ಕನ್ನಡಿ ನೋಡಿಕೊಂಡು ಹಲ್ಲುಜ್ಜುವವರಿಗೆ ನ್ಯೂಸ್ ಅಪ್ಡೇಟ್, ಫೇಸ್ಬುಕ್ ನೋಟಿಫಿಕೇಷನ್ಗಳು, ಹವಾಮಾನ ವರದಿ, ಡಿಜಿಟಲ್ ಟೈಂಗಳು ಕನ್ನಡಿಯ ಪರದೆ ಮೇಲೆ ಮೂಡುತ್ತವೆ. ದೇಹದ ತೂಕವೆಷ್ಟು, ಆರೋಗ್ಯದ ದೃಷ್ಟಿಯಿಂದ ತೂಕ ಎಷ್ಟು ಹೆಚ್ಚಿಸಿಕೊಳ್ಳಬೇಕು ಅಥವಾ ಇಳಿಸಬೇಕು, ಚರ್ಮದ ಆರೋಗ್ಯ ಹೇಗಿದೆ ಎಂಬ ಮಾಹಿತಿಯನ್ನು ಸಹ ನೀಡುತ್ತದೆ.!
ಹೈಮಿರರ್ ಮಿನಿ : ಈ 'ಹೈಮಿರರ್ ಮಿನಿ' ಈ ಕನ್ನಡಿಯಲ್ಲಿ ಪ್ರಲೋಡೆಡ್ ಮೇಕಪ್ ವಿಧಾನಗಳನ್ನು ಸೇರಿಸಲಾಗಿರುವುದರಿಂದ ನಿಮ್ಮ ಮುಖಕ್ಕೆ ಯಾವ ರೀತಿಯ ಮೇಕಪ್ನಲ್ಲಿ ಹೇಗೆ ಕಾಣುತ್ತೀರಾ ಎಂಬುದನ್ನು ತೋರಿಸುತ್ತದೆ.
ಕೊಹ್ಲರ್ ವರ್ಡೆರ ಸ್ಮಾರ್ಟ್ ಮಿರರ್: ಕೊಹ್ಲರ್ ಆಪ್ ಧ್ವನಿಯ ಮೂಲಕ ಅವುಗಳನ್ನು ನಿಯಂತ್ರಿಸಿ ಸ್ನಾನ ಮಾಡುತ್ತಲೇ, ಹವಾಮಾನ ವರದಿ, ಟ್ರಾಫಿಕ್ ಅಪ್ಡೆಟ್ನ ಮಾಹಿತಿ ಪಡೆಯಬಹುದಾಗಿದೆ.!!
ಫಿಲಿಪ್ಸ್ ಬಾತ್ ರೂಂ ಮಿರರ್: ಡಿಜಿಟಲ್ ಕನ್ನಡಿಯಲ್ಲಿ ಹಲ್ಲಿನ ಯಾವ ಭಾಗದಲ್ಲಿ ಉಜ್ಜುತ್ತಿದ್ದೀರಾ, ಅದರ ಒತ್ತಡವೆಷ್ಟು ಎಂಬೆಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ. ಗಡ್ಡವನ್ನು ಶೇವ್ ಮಾಡುತ್ತಿದ್ದರೆ, ನಿಮ್ಮ ಮುಖ ಹೊಂದುವ ಗಡ್ಡದ ಸ್ಟೈಲ್ ಯಾವುದು ಎಂದು ಸಹ ಹೇಳುತ್ತದೆ.
Comments