ನಿಮ್ಮ ಬಳಿ ಸ್ಮಾರ್ಟ್ ಫೋನ್ ಖರೀದಿಸಬೇಕಾ? ಹಾಗಿದ್ರೆ ಈ ಸುದ್ದಿ ಓದಿ

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುತ್ತೆ. ಅಂದ್ರೆ ಸ್ಮಾರ್ಟ್ ಫೋನ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ ಎಂದರ್ಥ . ಅದರ ಜೊತೆ ಇಂಟರ್ನೆಟ್ ಸಹ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿರುವುದರಿಂದ ಎಲ್ಲರು ಫೋನ್ ನಲ್ಲಿಯೇ ಹೆಚ್ಚುಕಾಲ ಕಳೆಯುತ್ತಿದ್ದರೆ. ಇಂತವರಿಗೆ .ಕ್ವಾಲ್ಕಾಮ್ಮ್ ಸಂಸ್ಥೆಯೊಂದು ಸಿಹಿ ಸುದ್ದಿ ನೀಡಲಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಜೊತೆಗೆ ವಿಡಿಯೋಗಳ ಸತತ ವೀಕ್ಷಣೆಯಿಂದಾಗಿ ಸ್ಮಾರ್ಟ್ ಫೋನಿನ ಬ್ಯಾಟರಿ ಬಹು ಬೇಗ ಖಾಲಿಯಾಗುತ್ತಿದ್ದ ಕಾರಣ ಫಜೀತಿಯಾಗುತ್ತಿತ್ತು. ಆದರೆ ಇನ್ನು ಮುಂದೆ ಅದಕ್ಕೆ ತೆರೆ ಬೀಳಲಿದೆ. ಬಹಳಷ್ಟು ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆಯಾಗುತ್ತಿರುವ ಪ್ರೊಸೆಸರ್ ನ ತಯಾರಿಕಾ ಸಂಸ್ಥೆ Qualcomm ಈ ವರ್ಷ ಬಿಡುಗಡೆ ಮಾಡಲಿರುವ ಸ್ನ್ಯಾಪ್ ಡ್ರ್ಯಾಗನ್ 845 ಕುರಿತು ಮಹತ್ವದ ಮಾಹಿತಿ ನೀಡಿದೆ. ಕಳೆದ ವರ್ಷದ ಸ್ನ್ಯಾಪ್ ಡ್ರ್ಯಾಗನ್ 835 ರ ಅಭಿವೃದ್ಧಿಪಡಿಸಿದ ವರ್ಷನ್ ಇದಾಗಿದ್ದು, ಸ್ನ್ಯಾಪ್ ಡ್ರ್ಯಾಗನ್ 835 ಗೆ ಹೋಲಿಸಿದರೆ ಬ್ಯಾಟರಿ ಕ್ಷಮತೆ ಶೇ. 30 ರಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ. ಜೊತೆಗೆ ಅತಿ ವೇಗದಲ್ಲಿ ಚಾರ್ಜ್ ಆಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
Comments