'ಫೇಸ್ಬುಕ್ ನ್ನು ಮತ್ತಷ್ಟು ಅರ್ಥ ಪೂರ್ಣಗೊಳಿಸಿದ ಜುಕರ್ಬರ್ಗ್

ಸಾಮಾಜಿಕ ಜಾಲತಾಣ ಅಂದಾಕ್ಷಣ ಈಗ ಎಲ್ಲರಿಗೂ ಹೊಳೆಯೋದು ಫೇಸ್ಬುಕ್. ಯಾಕಂದ್ರೆ ಫೇಸ್ಬುಕ್ ಅಷ್ಟರಮಟ್ಟಿಗೆ ಮನೆಮಾತಾಗಿದೆ. ಬೇರೆಲ್ಲಾ ಜಾಲತಾಣಗಳಿಗಿಂತ ಹೆಚ್ಚಾಗಿ ಫೇಸ್ಬುಕ್ ಅನ್ನೇ ಜನರು ಬಳಕೆ ಮಾಡ್ತಿದ್ದಾರೆ. ತಮ್ಮ ಅಮೂಲ್ಯ ಸಮಯವನ್ನು ಫೇಸ್ಬುಕ್ ನಲ್ಲಿ ಕಳೆಯುತ್ತಿದ್ದಾರೆ.
ಇದು ನಿಜಕ್ಕೂ ಫೇಸ್ಬುಕ್ ಗೆ ಖುಷಿ ಕೊಡೋ ವಿಚಾರ, ಗಳಿಕೆಯ ದೃಷ್ಟಿಯಿಂದ. ಆದ್ರೆ ಫೇಸ್ಬುಕ್ ಒಡೆಯ ಮಾರ್ಕ್ ಜುಕರ್ಬರ್ಗ್ ಗೆ ಮಾತ್ರ ಇದು ಸಮಾಧಾನ ತಂದಿಲ್ಲ. ಫೇಸ್ಬುಕ್ ಬಳಕೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಬೇಕು ಅನ್ನೋ ನಿಟ್ಟಿನಲ್ಲಿ ಅವರು ಕಸರತ್ತು ಮಾಡ್ತಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರಂತೆ. ಇದಕ್ಕಾಗಿ ಕೆಲವೊಂದು ವೈರಲ್ ವಿಡಿಯೋಗಳು, ಅಶ್ಲೀಲ ಕಂಟೆಂಟ್ ಗಳನ್ನೆಲ್ಲ ಫೇಸ್ಬುಕ್ ನಿಂದ ತೆಗೆದು ಹಾಕಲಾಗಿತ್ತು. ನಕಲಿ ಫೇಸ್ಬುಕ್ ಖಾತೆಗಳಿಗೂ ಬ್ರೇಕ್ ಬಿದ್ದಿತ್ತು. ಹಾಗಾಗಿ ಫೇಸ್ಬುಕ್ ಬಳಕೆದಾರರ ಸಂಖ್ಯೆಯಲ್ಲಿ 50 ಮಿಲಿಯನ್ ನಷ್ಟು ಇಳಿಕೆಯಾಗಿದೆಯಂತೆ. ಫೇಸ್ಬುಕ್ ಬ್ಯುಸಿನೆಸ್ ದೃಷ್ಟಿಯಿಂದ ಇದು ಬೇಸರದ ಸಂಗತಿ. ಆದ್ರೆ ಜುಕರ್ಬರ್ಗ್ ಗೆ ಮಾತ್ರ ಈ ವಿಚಾರ ಸಮಾಧಾನ ತಂದಿದೆ. ಫೇಸ್ಬುಕ್ ಬಳಕೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವಲ್ಲಿ ಯಶಸ್ವಿಯಾಗಿದ್ದೇನೆ ಅನ್ನೋ ಸಮಾಧಾನ.
Comments