ಜಿಯೊದಿಂದ ಮತ್ತೊಂದು ಸಿಹಿ ಸುದ್ದಿ..!
ಮುಂಬೈ: ಮೊಬೈಲ್ ಸೇವಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೊ, ಬ್ಯಾಂಕಿಂಗ್ ವಲಯದಲ್ಲೂ ಹವಾ ಸೃಷ್ಠಿಸಲು ಮುಂದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಕಾರಣದಿಂದ ವಿಳಂಬವಾಗಿದ್ದ ಈ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ವರ್ಷಾಂತ್ಯಕ್ಕೆ ಜಿಯೊ ಪೇಮೆಂಟ್ಸ್ ಬ್ಯಾಂಕ್ ಆರಂಭವಾಗಲಿದೆ.
ಭಾರತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿದೊಡ್ಡ ಬ್ಯಾಂಕ್ ಆಗಿದೆ. ಇದರ ಜಾಯಿಂಟ್ ವೆಂಚರ್ ನಲ್ಲಿ ರಿಲಯನ್ಸ್ ಜಿಯೊ ಪೇಮೆಂಟ್ಸ್ ಬ್ಯಾಂಕ್ ಕಾರ್ಯನಿರ್ವಹಿಸಲಿದೆ.ಮಾರ್ಚ್ ನಲ್ಲಿ 100 ಮಿಲಿಯನ್ ಗ್ರಾಹಕರನ್ನು ತಲುಪಿದ ಜಿಯೊ, ಪೇಮೆಂಟ್ಸ್ ಬ್ಯಾಂಕ್ ಆರಂಭಿಸಲು ಆರ್.ಬಿ.ಐ.ನಿಂದ ಅನುಮತಿ ಪಡೆದುಕೊಂಡಿದೆ.
ಎಸ್.ಬಿ.ಐ. ಏಪ್ರಿಲ್ 1 ರ ವೇಳೆಗೆ 420 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಹೊಸ ಗ್ರಾಹಕರನ್ನು ತಲುಪಲು ಜಿಯೊ ನೆರವಾಗಲಿದೆ. ಆಗಸ್ಟ್ 31 ರ ವೇಳೆಗೆ ಜಿಯೊ 129 ದಶಲಕ್ಷ ಗ್ರಾಹಕರನ್ನು ಹೊಂದಿದ್ದು, ಪೇಮೆಂಟ್ಸ್ ಬ್ಯಾಂಕ್ ನಿಂದ ಹೆಚ್ಚು ಗ್ರಾಹಕರನ್ನು ತಲುಪಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಅದಕ್ಕೆ ಸಾಧ್ಯವಾಗಲಿದೆ.
Comments