ಗೂಗಲ್ ಗೆ 19 ನೇ ಹಟ್ಟುಹಬ್ಬದ ಸಂಭ್ರಮ
ಪ್ರತಿಯೊಂದಕ್ಕೂ ಉತ್ತರ ನೀಡಬಲ್ಲ ‘ಶಕ್ತಿ’ ಇರುವುದು ಗೂಗಲ್‌ಗೆ. ಹೌದು, ಕಳೆದ 19 ವರ್ಷಗಳಿಂದ ಜನರ ಎಲ್ಲ ಪ್ರಶ್ನೆಗಳಿಗೆ ಗೂಗಲ್ ಸರ್ಚ್ ಎಂಜಿನ್ ಅರ್ಥಪೂರ್ಣ ಉತ್ತರ ನೀಡುತ್ತಾ ಬಂದಿದೆ. ಇಂಥ ಗೂಗಲ್‌ಗೆ ಬುಧವಾರ (ಸೆ.27) 19 ವರ್ಷ ತುಂಬಿ 20ನೇ ವರ್ಷಕ್ಕೆ ಕಾಲಿಟ್ಟಿದೆ. ಹೀಗಾಗಿ ಗೂಗಲ್ ಸಂಸ್ಥೆಯು ವಿಶೇಷವಾಗಿ ರಚಿಸಿರುವ ಡೂಡಲ್ ಮೂಲಕ ಹುಟ್ಟಿದಹಬ್ಬ ಆಚರಿಸಿದೆ.
ಈ ಡೂಡಲ್‌ನಲ್ಲಿ ತಿರುಗುವ ಚಕ್ರವಿದ್ದು ಅದರಲ್ಲಿ 19 ಭಾಗಗಳಿವೆ. ಒಂದೊಂದಕ್ಕೂ ಒಂದೊಂದು ಬಣ್ಣ ತುಂಬಲಾಗಿದ್ದು, ಆಟಗಳ ಮೂಲಕ ಚಿತ್ರಿಸಲಾಗಿದೆ. ಇಲ್ಲಿ ವಿವಿಧ ಆಟವಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ‘ಗೂಗಲ್ ಡಾಟ್ ಕಾಮ್’ ಎಂದು ಟೈಪ್ ಮಾಡಿದ ತಕ್ಷಣ ಈ ಪುಟ ತೆರೆದುಕೊಳ್ಳುತ್ತದೆ. ಈ 19 ವರ್ಷಗಳಲ್ಲಿ ಹುಡುಕಾಟದ ಆಚೆಗೂ ಗೂಗಲ್ ದೈತ್ಯವಾಗಿ ಬೆಳೆದುನಿಂತಿದೆ. 1998ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪಿಎಚ್.ಡಿ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಹಾಗೂ ಸರ್ಜೆ ಬ್ರಿನ್ ಅವರು ಗೂಗಲ್ ಸಂಸ್ಥೆ ಹುಟ್ಟುಹಾಕಿದರು. ಪ್ರಸ್ತುತ 160 ದೇಶಗಳ 460 ಕೋಟಿ ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ. 123 ಭಾಷೆಗಳಲ್ಲಿ ಹುಡುಕಾಟ ನಡೆಸಬಹುದು.
Comments