ಆಫ್ ಲೈನ್ ಶಾಪಿಂಗ್ ಅನ್ನೂ ಫೇಸ್ಬುಕ್ ಟ್ರ್ಯಾಕ್ ಮಾಡ್ತಿದೆ

ಯಾವುದಾದ್ರೂ ಮಾಲ್ ಅಥವಾ ಸ್ಟ್ರೀಟ್ ಗೆ ವಿಸಿಟ್ ಮಾಡಿದಾಗ ನಿಮ್ಮ ಲೊಕೇಶನ್ ಅನ್ನು ನೀವು ಫೇಸ್ಬುಕ್ ನಲ್ಲಿ ಶೇರ್ ಮಾಡಿರ್ತೀರಾ. ಅದರ ಸಹಾಯದಿಂದ ಫೇಸ್ಬುಕ್ ನಿಮ್ಮ ಶಾಪಿಂಗ್ ಹಿಸ್ಟರಿ ತಿಳಿದುಕೊಳ್ಳುತ್ತದೆ. ಜಾಹೀರಾತು ಕಂಪನಿಗಳಿಗೆ ಅದನ್ನೇ ಹೊಸ ಅಸ್ತ್ರವನ್ನಾಗಿ ನೀಡುತ್ತದೆ.
ಫೇಸ್ಬುಕ್ ನಲ್ಲಿ ಬಳಕೆದಾರರಿಗೆ ಜಾಹೀರಾತುಗಳ ಕಾಟ ಇದ್ದೇ ಇದೆ. ಆನ್ ಲೈನ್ ನಲ್ಲಿ ನೀವು ಯಾವ ಪ್ರಾಡಕ್ಟ್ ನೋಡಿದ್ರೂ ಮರುಕ್ಷಣದಲ್ಲೇ ಒಂದಷ್ಟು ಜಾಹೀರಾತುಗಳು ನಿಮ್ಮ ಪೇಜ್ ನಲ್ಲಿ ಪ್ರತ್ಯಕ್ಷವಾಗುತ್ತವೆ. ಆದ್ರೀಗ ಕೇವಲ ಆನ್ ಲೈನ್ ಮಾತ್ರವಲ್ಲ, ಬಳಕೆದಾರರ ಆಫ್ ಲೈನ್ ಶಾಪಿಂಗ್ ಅನ್ನೂ ಫೇಸ್ಬುಕ್ ಟ್ರ್ಯಾಕ್ ಮಾಡ್ತಿದೆ. ಇದಕ್ಕಾಗಿಯೇ ಕೆ ಎಫ್ ಸಿ ಹಾಗೂ ಅಮೆರಿಕ ಮ್ಯಾಕೆಸ್ ಕಂಪನಿಗಳು ಫೇಸ್ಬುಕ್ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ಗ್ರಾಹಕರ ಆಫ್ ಲೈನ್ ಶಾಪಿಂಗ್ ಅನ್ನು ಕೂಡ ಗಮನಿಸ್ತಾ ಇರೋ ಏಕೈಕ ಕಂಪನಿ ಅಂದ್ರೆ ಫೇಸ್ಬುಕ್. ಇದರಿಂದ ಗೂಗಲ್ ಗೂ ಸಹಾಯವಾಗಲಿದೆ.
Comments