ರಾಷ್ಟ್ರದ ಪ್ರಖ್ಯಾತ ರಸಾಯನಶಾಸ್ತ್ರಜ್ಞೆ ಅಸೀಮಾ ಚಟರ್ಜಿಯ ಜನ್ಮಶತಮಾನೋತ್ಸವ

23 Sep 2017 1:17 PM | Technology
262 Report

ಡಾ. ಅಸೀಮಾ ಅವರು ವಿನ್ಸಾ ಆಲ್ಕಲಾಯ್ಡ್ಸಾ ಕ್ಷೇತ್ರದಲ್ಲಿನ ಸಂಶೋಧನೆ ನಡೆಸಿದ್ದರಲ್ಲದೆ ಅಪಸ್ಮಾರ ಹಾಗೂ ಮಲೇರಿಯಾ ಚಿಕಿತ್ಸೆಯ ಔಷಧಿ ಅಭಿವೃದ್ಧಿ ಪಡಿಸುವಲ್ಲಿ ಮಹತ್ತರ ಕೊಡುಗೆ ನೀಡಿದ್ದರು. ಅಸೀಮಾ ಚಟರ್ಜಿಯವರ ಜನ್ಮಶತಮಾನೋತ್ಸವವನ್ನು ಇಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಗೂಗಲ್ ಅವರಿಗೆ ಡೂಡಲ್ ಮೂಲಕ ಗೌರವ ಅರ್ಪಿಸಿದೆ.

ಭಾರತದ ವಿಶ್ವವಿದ್ಯಾಲಯವೊಂದರಿಂದ ವಿಜ್ಞಾನ ವಿಭಾಗದಲ್ಲಿ ಡಾಕ್ಟರೇಟ್ ಪಡೆದ ಪ್ರಪ್ರಥಮ ಮಹಿಳೆ ಹಾಗೂ ಖ್ಯಾತ ರಸಾಯನಶಾಸ್ತ್ರಜ್ಞೆ ಅಸೀಮಾ ಚಟರ್ಜಿ.'ಮಡಗಾಸ್ಕರ್ ಪೆರಿವಿಂಕಲ್ ಗಿಡದಿಂದ ತಯಾರಾಗುವ ವಿನ್ಸಾ ಆಲ್ಕಲಾಯ್ಡ್ಸಾ ಇಂದು ಕೆಮೋಥೆರಪಿ ಚಿಕಿತ್ಸೆಗಾಗಿ ನೀಡಲಾಗುತ್ತಿದೆಯಲ್ಲದೆ ಅವುಗಳು ಕ್ಯಾನ್ಸರ್ ಕೋಶಗಳು ವೇಗವಾಗಿ ಬೆಳೆಯುವುದನ್ನು ತಡೆಗಟ್ಟುತ್ತವೆ. ಅವರ ಕೊಡುಗೆಗಳನ್ನು ವಿಶ್ವದಾದ್ಯಂತ ವಿಶ್ವವಿದ್ಯಾಲಯಗಳು ಗುರುತಿಸಿದ್ದವು. ಭಾರತ ಸರಕಾರ ಅವರಿಗೆ ಪದ್ಮಭೂಷಣ ಹಾಗೂ ಮೇಲ್ಮನೆ ಸದಸ್ಯತ್ವ ನೀಡಿ ಗೌರವಿಸಿತ್ತು,'' ಎಂದು ಗೂಗಲ್ ಬ್ಲಾಗ್ ನಲ್ಲಿ ವಿವರಿಸಲಾಗಿದೆ.
ಅಸೀಮಾ ಅವರು ಕೊಲ್ಕತ್ತಾ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಲೇಡಿ ಬ್ರಬೌರ್ನ್ ಕಾಲೇಜಿಗೆ 1940ರಲ್ಲಿ ಉದ್ಯೋಗಕ್ಕೆ ಸೇರಿ ಅಲ್ಲಿ ರಸಾಯನಶಾಸ್ತ್ರ ವಿಭಾಗವನ್ನು ಆರಂಭಿಸಿದ್ದರು.
ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗುವ ಯೋಗವೂ ಅವರಿಗೆ 1975ರಲ್ಲಿ ಒಲಿದು ಬಂದಿತ್ತು. ಡಾ. ಅಸೀಮಾ ಅವರು ಡಾ. ಬರದಾನಂದ ಚಟರ್ಜಿ ಅವರನ್ನು ವಿವಾಹವಾಗಿದ್ದರು, ದಂಪತಿಗೆ ಜೂಲಿ ಎಂಬ ಓರ್ವ ಪುತ್ರಿಯಿದ್ದಾರೆ. ಅಸೀಮಾ ಅವರು 90ನೆ ವಯಸ್ಸಿನಲ್ಲಿ 2006ರಲ್ಲಿ ನಿಧನರಾಗಿದ್ದರು.

Edited By

venki swamy

Reported By

Madhu shree

Comments