ಹೈಸ್ಕೂಲ್ ವಿದ್ಯಾರ್ಥಿಗೆ 6.5 ಲಕ್ಷ ರೂ. ಬಹುಮಾನ ನೀಡಿದೆ ಗೂಗಲ್

ಗೂಗಲ್, ಸೈಬರ್ ಸೆಕ್ಯೂರಿಟಿ ಹಾಗೂ ಸೆಕ್ಯೂರ್ಡ್ ನೆಟ್ವರ್ಕ್ ಗಳನ್ನು ಹೊಂದಿದೆ. ಆದ್ರೆ ಗೂಗಲ್ ನಲ್ಲೂ ಭದ್ರತಾ ಲೋಪವಿರೋದನ್ನು ವಿದ್ಯಾರ್ಥಿಯೊಬ್ಬ ಪತ್ತೆ ಮಾಡಿದ್ದಾನೆ. ಉರುಗ್ವೆಯ ಹೈಸ್ಕೂಲ್ ವಿದ್ಯಾರ್ಥಿಗೆ ಗೂಗಲ್, 10,000 ಡಾಲರ್ ಅಂದ್ರೆ ಸರಿಸುಮಾರು 6.5 ಲಕ್ಷ ರೂಪಾಯಿ ನೀಡಿ ಗೌರವಿಸಿದೆ.
ಎಜೆಕ್ವೀಲ್ ಪೆರೆರಾ ಎಂಬ ವಿದ್ಯಾರ್ಥಿ ಬೋರ್ ಆಗ್ತಿದೆ ಅಂದ್ಕೊಂಡು ಗೂಗಲ್ ಸರ್ವೀಸ್ ಓಪನ್ ಮಾಡಿಕೊಂಡು ಕುಳಿತಿದ್ದ. ಸೆಕ್ಯೂರಿಟಿ ಟೂಲ್ ಇಟ್ಕೊಂಡು ಚೆಕ್ ಮಾಡುತ್ತಿದ್ದ. ಮೂರ್ನಾಲ್ಕು ಬಾರಿ ಪ್ರಯತ್ನಿಸಿದ ಮೇಲೆ ಓಪನ್ ಆಯ್ತು. ಅದಕ್ಕೆ ಯಾವುದೇ ಯೂಸರ್ ನೇಮ್, ಪಾಸ್ವರ್ಡ್ ಇರಲಿಲ್ಲ.ಅದರಲ್ಲಿ ಗೂಗಲ್ ನ ವಿವಿಧ ಆಯಪ್ ಗಳಿವೆ, ಅಸಲಿಗೆ ಅದೊಂದು ಎಂಜಿನ್ ಆಯಪ್. ಕೊನೆಗೆ ಪೆರೆರಾ ಗೂಗಲ್ ಟೆಸ್ಟ್ ಹ್ಯಾಕಿಂಗ್ ಸೈಟ್ ನಲ್ಲಿ ಈ ವಿಷಯ ಬರೆದಿದ್ದ. ಗೂಗಲ್ ನ ರಹಸ್ಯ ವೆಬ್ ಸೈಟ್ ಈ ರೀತಿ ಓಪನ್ ಆಗ್ತಿದೆ ಅಂತಾ ತಿಳಿಸಿದ್ದ. ಸ್ಕ್ರೀನ್ ಶಾಟ್ ಅನ್ನು ಕೂಡ ಶೇರ್ ಮಾಡಿದ್ದ.
ಪೆರೆರಾಗೆ ಇಮೇಲ್ ಕಳುಹಿಸಿದ ಗೂಗಲ್ ಇನ್ನಷ್ಟು ವಿವರಗಳನ್ನು ಪಡೆದುಕೊಂಡಿತ್ತು. ಭದ್ರತಾ ಲೋಪವನ್ನೂ ನಂತರ ಸರಿಪಡಿಸಿದೆ. ಇದಾಗಿ ಒಂದು ತಿಂಗಳ ನಂತರ ಪೆರೆರಾಗೆ 10,000 ಡಾಲರ್ ಅನ್ನು ಬಹುಮಾನವಾಗಿ ನೀಡಿದೆ.
Comments