ಶಿಯೋಮಿ ಗ್ರಾಹಕರಿಗೆ ಜಿಯೋನಿಂದ ಭರ್ಜರಿ ಕೊಡುಗೆ; ಪಡೆದುಕೊಳ್ಳುವುದು ಹೇಗೆ?
ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಹೊಸದಾಗಿ ತನ್ನ ಫೋನುಗಳನ್ನು ಖರೀದಿಸುವವರಿಗೆ ಜಿಯೋದಿಂದ ಹೆಚ್ಚಿನ ಡೇಟಾ ಲಾಭವನ್ನು ಮಾಡಿಕೊಡಲಿದೆ.
ಆಯ್ದ ಕೇಲವು ಶಿಯೋಮಿ ಫೋನ್‌ಗಳನ್ನು ಖರೀದಿಸಿದ ಸಂದರ್ಭದಲ್ಲಿ ಜಿಯೋ 30GB ಡೇಟಾವನ್ನು ಹೆಚ್ಚಾಗಿ ನೀಡಲಿದೆ. ಇದರಿಂದ ಶಿಯೋಮಿಗೂ ಲಾಭವಾಗಲಿದ್ದು, ಜಿಯೋಗೂ ಹೊಸ ಗ್ರಾಹಕರು ದೊರೆತಂತೆ ಆಗಲಿದೆ. ಇದರಿಂದ ಇಬ್ಬರಿಗೂ ಹೆಚ್ಚಿನ ಲಾಭ ದೊರೆಯಲಿದೆ.
ಶಿಯೋಮಿ ಬಿಡುಗಡೆ ಮಾಡಿರುವ ರೆಡ್ಮಿ 2, ರೆಡ್ಮಿ 2 ಪ್ರೈಮ್, ರೆಡ್ಮಿ ನೋಟ್ 4 ಜಿ, ರೆಡ್ಮಿ ನೋಟ್ 4 ಜಿ ಪ್ರೈಮ್, ಮಿ 4i, ರೆಡ್ಮಿ ನೋಟ್ 3, ಮಿ 5, ಮಿ ಮ್ಯಾಕ್ಸ್, ಮಿ ಮ್ಯಾಕ್ಸ್ ಪ್ರೈಮ್, ರೆಡ್ಮಿ 3 , ರೆಡ್ಮಿ 3 ಎಸ್ ಪ್ಲಸ್, ರೆಡ್ಮಿ 3 ಎಸ್ ಪ್ರೈಮ್, ರೆಡ್ಮಿ ನೋಟ್ 4, ರೆಡ್ಮಿ 4 ಎ , ಮತ್ತು ರೆಡ್ಮಿ 4 ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ದೊರೆಯಲಿದೆ.
ಜೂನ್ 16 ರ ನಂತರದಲ್ಲಿ ಶಿಯೋಮಿ ಮೊಬೈಲ್ ಫೋನ್ ಕೊಂಡವರಿಗೆ ಜಿಯೋ ದಿಂದ 30GB ಹೆಚ್ಚುವರಿ ಡೇಟಾ ಆಫರ್ ದೊರೆಯಲಿದೆ ಎನ್ನಲಾಗಿದೆ.
ಈ ಆಫರ್ ನಿಮಗೆ ಒಟ್ಟು 6 ಬಾರಿ ಪ್ರತಿ ತಿಂಗಳು ಜಿಯೋ ರಿಜಾರ್ಜ್ ಮಾಡಿಸಿದ ಸಂದರ್ಭದಲ್ಲಿ 5GB ಹೆಚ್ಚುವರಿ ಡೇಟಾವು ದೊರೆಯಲಿದೆ. ಉದಾ: ನೀವು ಪ್ರತಿ ತಿಂಗಳು ರೂ.309 ರೀಚಾರ್ಜ್ ಮಾಡಿಸಿದರೆ ನಿಮಗೆ ಪ್ರತಿ ಬಾರಿಯೂ 5GB ಹೆಚ್ಚುವರಿ ಡೇಟಾ ದೊರೆಯಲಿದೆ.
ಜಿಯೋ ನೀಡಿರುವ ಈ ಆಫರ್ ಪಡೆದುಕೊಳ್ಳಬೇಕಾದರೆ ಹೀಗೆ ಮಾಡಿರಿ:
Open MyJio App -> My Vouchers -> View Voucher -> Recharge my number -> Confirm Recharge -> Successful Recharge Notification.
Comments