ಲಾಕ್ ಡೌನ್ ವೇಳೆ ಮನೆಯಲ್ಲಿ ಕುಳಿತೇ ಕೋಟಿ ಕೋಟಿ ಗಳಿಸಿದ ವಿರಾಟ್ ಕೊಹ್ಲಿ..!

ಲಾಕ್ ಡೌನ್ ನಿಂದ ಕ್ರಿಕೆಟ್ ಜಗತ್ತು ಸ್ತಬ್ಧವಾಗಿದೆ. ಕಳೆದೆರಡು ತಿಂಗಳಿನಿಂದ ಯಾವುದೇ ಕ್ರಿಕೆಟ್ ಪಂದ್ಯಗಳಿಲ್ಲ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಮುಂಬೈನ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಆದರೆ ಮನೆಯಲ್ಲಿಯೇ ಕುಳಿತು ಕೊಹ್ಲಿ ಕೋಟ್ಯಾಂತರ ರೂ. ಸಂಪಾದಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾರ್ಚ್ 12ರಿಂದ ಮೇ 14 ರ ಅವಧಿಯಲ್ಲಿ ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್ ಗಳಿಂದ ಬರೋಬ್ಬರಿ 3.6 ಕೋಟಿ ರೂಪಾಯಿ ಗಳಿಸಿದ್ದು, ಟಾಪ್ 10 ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನ ಗಳಿಸಿದ್ದಾರೆ. ಖ್ಯಾತ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ 17.28 ಕೋಟಿ ರೂಪಾಯಿ ಗಳಿಸಿ ಮೊದಲ ಸ್ಥಾನದಲ್ಲಿದ್ದು, ಲಿಯೋನಲ್ ಮೆಸ್ಸಿ 11.52 ಕೋಟಿ ರೂಪಾಯಿಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ನೇಯ್ಮರ್ 10.56 ಕೋಟಿಗಳಿಸಿ ಮೂರನೇ ಸ್ಥಾನದಲ್ಲಿ ಇದ್ದಾರೆ.
Comments