ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ ಬಳಸಿ ಮಾನ ಕಳೆದುಕೊಂಡ ಬಿಸಿಸಿಐ

ಬರ್ಸಾಪುರ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಟಾಸ್ ಮುಗಿದ ಬೆನ್ನಲ್ಲೇ ನಿರಂತರ ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು ಕೆಲಕಾಲ ಮುಂದೂಡಲಾಯಿತು. ಪಿಚ್ ಒದ್ದೆಯಾಗಿದ್ದರಿಂದ ಒಣಗಿಸಲು ಹೇರ್ ಡ್ರೈಯರ್ ಹಾಗೂ ಐರನ್ ಬಾಕ್ಸ್ ಬಳಸಿದ್ದು ಕಟು ಟೀಕೆಗೆ ಗುರಿಯಾಗಿದೆ.
ಮಳೆಯಿಂದ ಒದ್ದೆಯಾಗಿದ್ದ ಪಿಚ್ ಒಣಗಿಸಲು ಸಿಬ್ಬಂದಿ ವಾಕ್ಯೂಮ್ ಕ್ಲೀನರ್ ಮತ್ತು ಹೇರ್ ಡ್ರೈಯರ್ ಬಳಿಸಿದ್ದರು. ಇದಕ್ಕೆ ಗರಂ ಆಗಿರುವ ನೆಟಿಗರು, ವಿಶ್ವದ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐ ಹೇರ್ ಡ್ರೈಯರ್ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯವನ್ನು ಸಣ್ಣ ಕಾರಣಕ್ಕೆ ರದ್ದು ಮಾಡಲಾಗಿದೆ. ತಂತ್ರಜ್ಞಾನದ ಸಹಾಯ ಪಡೆದು ಪಿಚ್ ಒಣಗಿಸಬಹುದಿತ್ತು. ಆದರೆ ಪಂದ್ಯ ರದ್ದು ಮಾಡಿದ್ದು ಎಷ್ಟು ಸರಿ? ವಾಟ್ ಎ ಶೇಮ್ ಎಂದು ಟ್ವೀಟಿಸಿದ್ದಾರೆ.ಅದೆಷ್ಟೋ ಮಂದಿ ಸಾವಿರ ಸಾವಿರ ರೂ. ನೀಡಿ ಪಂದ್ಯ ವೀಕ್ಷಣೆಗೆ ಟಿಕೆಟ್ ತೆಗೆದುಕೊಂಡಿದ್ದರು. ಒಂದು ಸಣ್ಣ ತುಂತುರು ಮಳೆಯಿಂದ ಪಂದ್ಯ ರದ್ದಾದರೆ ಹೇಗೆ? ಅದು ಏನೇ ಹೇಳಿ ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಇಂಥ ಸ್ಥಿತಿ ಬರಬಾರದಿತ್ತು
Comments