ವಿರಾಟ್ ಕೊಹ್ಲಿ ಅರೆಬೆತ್ತಲೆ ಫೋಟೋ ವೈರಲ್..!!

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯ ಅರೆ ಬೆತ್ತಲೆ ಪೋಟೋ ಹರಿದಾಡುತ್ತಿದೆ.. ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಅರೆಬೆತ್ತಲೆ ಚಿತ್ರವೊಂದು ಇದೀಗ ಟ್ರೋಲ್‌ಗೆ ಒಳಗಾಗಿದೆ. ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಶರ್ಟ್ ಇರದ ಫೋಟೋವೊಂದನ್ನು ಗುರುವಾರ ಪೋಸ್ಟ್ ಮಾಡಿದ್ದರು..
ಇದೀಗ ಆ ಪೋಟೋಗೆ ನೆಟ್ಟಿಗರು ಭಾರಿ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದ್ದಾರೆ..ಟ್ರಾಫಿಕ್ ಫೈನ್ ಕಟ್ಟಿದ ನಂ.1 ಕ್ರಿಕೆಟಿಗ ಬಹುಶಃ ನೀವು ಟ್ರಾಫಿಕ್ ಚಲನ್ ಕಟ್ಟಿರಬೇಕು ಎಂಬುದಾಗಿ ಟ್ರಾಫಿಕ್ ಫೈನ್‌ಗೆ ಸಂಬಂಧಿಸಿಯೇ ಹೆಚ್ಚು ಜನ ವಿರಾಟ್ ಕೊಹ್ಲಿ ಪೋಟೋಗೆ ತಮಾಷೆ ಮಾಡಿದ್ದಾರೆ. ಆ ಮೂಲಕ ಇತ್ತೀಚೆಗೆ ರಸ್ತೆ ನಿಯಮ ಉಲ್ಲಂಘನೆಗೆ ಹಲವೆಡೆ ವಿಧಿಸಲಾಗುತ್ತಿರುವ ದುಬಾರಿ ದಂಡವನ್ನು ಸಾರ್ವಜನಿಕರು ಪರೋಕ್ಷವಾಗಿ ಟೀಕಿಸಿದ್ದಾರೆ. ಈಗಾಗಲೇ ಟ್ರಾಫಿಕ್ ರೂಲ್ಸ್ ನಿಂದಾಗಿ ಈಗಾಗಲೇ ಜನ ಬೇಸತ್ತು ಹೋಗಿದ್ದಾರೆ.. ಹೀಗಾಗಿ ವಿರಾಟ್ ಕೊಹ್ಲಿ ಪೊಟೋವನ್ನು ಇಟ್ಟುಕೊಂಡು ಜನ ಅವರ ಕಾಲೆಳೆದಿದ್ದಾರೆ.
Comments