ಕ್ರಿಕೇಟರ್ ಶ್ರೀಶಾಂತ್ ಮನೆಯಲ್ಲಿ ಬೆಂಕಿ ಅವಘಡ..!!
ಬಿಸಿಸಿಐನಿಂದ ಕೆಲ ದಿನಗಳ ಹಿಂದಷ್ಟೆ ಶ್ರೀಶಾಂತ್ ಗೆ ಸಿಹಿ ಸುದ್ದಿ ಸಿಕ್ಕಿತ್ತು… ಆದರೆ ಇದೀಗ ಕ್ರಿಕೆಟರ್ ಶ್ರೀಶಾಂತ್ ಗೆ ಆಘಾತಕಾರಿ ಸುದ್ದಿ ಕೇಳಿ ಬಂದಿದೆ. ಶ್ರೀಶಾಂತ್ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕೊಚ್ಚಿಯಲ್ಲಿರುವ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಸದ್ಯ ಯಾರಿಗೂ ಏನು ಆಗಿಲ್ಲ ಎಲ್ಲಾ ಪ್ರಾಣಪಾಯದಿಂದ ಪಾರಾಗಿದ್ದಾರೆ. .
ಘಟನೆ ನಡೆದ ವೇಳೆ ಶ್ರೀಶಾಂತ್ ಪತ್ನಿ ಹಾಗೂ ಮಗ ಮನೆಯಲ್ಲಿದ್ದರಂತೆ. ಅದೃಷ್ಟವಶಾತ್ ಅವರಿಗೂ ಕೂಡ ಯಾವುದೇ ಗಾಯವಾಗಿಲ್ಲ. ಘಟನೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.. ಕೆಲವೇ ಕ್ಷಣಗಳಲ್ಲಿ ಬೆಂಕಿ ನಂದಿಸಲು ಯಶಸ್ವಿಯಾದ ಕಾರಣ ಯಾವುದೇ ಅನಾಹುತ ಘಟನೆಗಳು ನಡೆದಿಲ್ಲ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶ್ರೀಶಾಂತ್ ಗೆ ಬಿಸಿಸಿಐ ಆಜೀವ ನಿಷೇಧ ಶಿಕ್ಷೆ ವಿಧಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಶೀಘ್ರವೇ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಬಿಸಿಸಿಐಗೆ ಹೇಳಿತ್ತು. ಈ ಪ್ರಕಾರ ಬಿಸಿಸಿಐ ಆಜೀವ ನಿಷೇಧ ತೆಗೆದುಹಾಕಿ ಶಿಕ್ಷೆಯನ್ನು 7 ವರ್ಷಕ್ಕೆ ಸೀಮಿತಗೊಳಿಸಿದೆ. ಒಟ್ಟಿನಲ್ಲಿ ಬಿಸಿಸಿಐನಿಂದ ಸದ್ಯ ಶ್ರೀಶಾಂತ್ ಗೆ ರಿಲೀಪ್ ಸಿಕ್ಕಿದಂತೆ ಆಗಿದೆ.
Comments