ಭಾರತಕ್ಕೆ ವೆಸ್ಟ್ ಇಂಡೀಸ್ ವಿರುದ್ಧ 59 ರನ್ ಗಳ ಜಯ
ನೆನ್ನೆಯಷ್ಟೆ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಪಂದ್ಯ ನಡೆದಿದೆ.. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಭಾರತ 59 ರನ್ ಗಳ ಭರ್ಜರಿ ಜಯವನ್ನು ಸಾಧಿಸಿದೆ. ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆದ ಏಕ ದಿನ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡಕ್ಕೆ 280 ರನ್ ಗಳ ಗುರಿಯನ್ನು ನೀಡಿತ್ತು.
ಪಂದ್ಯಕ್ಕೆ ಮಳೆ ಅಡ್ಡಿ ಆದ ಕಾರಣ ಡಕ್ವರ್ತ್ ಲೂಯಿಸ್ ನಿಯಮವನ್ನು ಅನ್ವಯ ವೆಸ್ಟ್ ಇಂಡೀಸ್ ತಂಡಕ್ಕೆ 46 ಓವರ್ ಗಳಲ್ಲಿ 270 ರನ್ ಗಳ ಗುರಿ ನೀಡಲಾಯಿತು. ವೆಸ್ಟ್ ಇಂಡೀಸ್ ತಂಡ 270 ರನ್ ಗಳ ಗುರಿಯನ್ನು ಬೆನ್ನಟ್ಟಿತ್ತು.. ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್ 45 ರನ್ ಗಳವರೆಗೂ ಕೂಡ ಜೊತೆಯಾಗಿಯೇ ಆಡಿದರು.. ನಂತರ 10 ನೇ ಓವರ್ ನಲ್ಲಿ ಕ್ರಿಸ್ ಗೇಲ್ ಭುವನೇಶ್ವರ್ ಕಿಮಾರ್ ಗೆ ವಿಕೆಟ್ ಒಪ್ಪಿಸಿದರು. ನಂತರ 35 ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಪೂರನ್ ಅವರನ್ನು ಪೆವಿಲಿಯನ್ ಗೆ ಕಳಿಸಿ ವೆಸ್ಟ್ ಇಂಡೀಸ್ ತಂಡ ಸಂಕಷ್ಟ ಎದುರಿಸುವಂತೆ ಮಾಡಿದರು ಅಂತಿಮವಾಗಿ ವೆಸ್ಟ್ ಇಂಡೀಸ್ ಭಾರತದೆದುರು 59 ರನ್ ಗಳ ಸೋಲು ಕಂಡಿತು. ಒಟ್ಟಿನಲ್ಲಿ ಈ ಬಾರಿ ಭಾರತ ವಿಶ್ವಕಪ್ ಸೋತಿದ್ದು ಸಾಕಷ್ಟು ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿತ್ತು..
Comments