ರೋಹಿತ್ ಮತ್ತು ಕೊಹ್ಲಿ ನಡುವಿನ ಜಗಳಕ್ಕೆ ಕಾರಣ ಏನ್ ಗೊತ್ತಾ..?
ಈ ಬಾರಿಯ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೋತಿದ್ದು ಸಾಕಷ್ಟು ಅಭಿಮಾನಿಗಳಿಗೆ ಬೇಸರ ತಂದಿತ್ತು.. ಈ ಬಾರಿಯ ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು.. ಈ ನಡುವೆ ವಿಶ್ವಕಪ್ ಟೂರ್ನಿ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಒಳಗೊಳಗೆ ಗುದ್ದಾಟಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.. ಇದೀಗ ಅದರ ನಡುವೆ ಪುಷ್ಟಿ ನೀಡುವಂತೆ ಮತ್ತೊಂದು ಸುದ್ದಿಹರಿದಾಡುತ್ತಿದೆ.
ಭಾರತ ಸದ್ಯ ಆಗಸ್ಟ್ 3ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ಸರಣಿಗೆ ತೆರಳಿದೆ. ಇದರ ಮಧ್ಯೆ ರೋಹಿತ್ ಶರ್ಮಾ ಪತ್ನಿ ರಿತಿಕ ಅವರ ಹೆಸರು ಸಖತ್ ಸದ್ದು ಮಾಡುತ್ತಿದೆ.. ರೋಹಿತ್ ಪತ್ನಿಯ ಕೆಲ ಹಳೆಯ ಫೋಟೋಗಳು ಸೋಷಿಯಲ್ ಮಿಡೀಯಾದಲ್ಲಿ ಹರಿದಾಡುತ್ತಿವೆ.. ಕೊಹ್ಲಿ 2013ರ ವೇಳೆ ರಜಾ ದಿನವನ್ನು ಮುಂಬೈನಲ್ಲಿ ಕಳೆದಿದ್ದರು. ಈ ವೇಳೆ ರಿತಿಕಾ ಕೊಹ್ಲಿ ಜೊತೆ ಸಿನಿಮಾ ಹಾಲ್‍ನಲ್ಲಿ ಕಾಣಿಸಿಕೊಂಡಿದ್ದರು. ವಿರಾಟ್ ಕೊಹ್ಲಿ ಮೊದಲ ಬಾರಿಗೆ 2010ರ ಐಪಿಎಲ್ ಸಮಯದಲ್ಲಿ ರಿತಿಕಾರನ್ನು ಭೇಟಿಯಾಗಿದ್ದರು. ಈ ವೇಳೆ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ರಿತಿಕಾ, ವಿರಾಟ್ ಕೊಹ್ಲಿಯ ವ್ಯವಹಾರ ನೋಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು.. ಅಷ್ಟೆ ಅಲ್ಲದೇ ಈ ಜೋಡಿ ಮೂವಿ ಡೇಟ್, ಡಿನ್ನರ್ ಡೇಟ್‍ಗೆ ಕೂಡ ಹೋಗುತ್ತಿದ್ದರು.. ಹಲವು ಊಹಾಪೋಹಗಳಿಗೆ ಕಾರಣವಾದ ನಂತರ ರಿತಿಕಾ ಆ ಕೆಲಸವನ್ನು ಬಿಟ್ಟಿದ್ದರಂತೆ.. ಕೆಲ ಹಳೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಮಧ್ಯ ಮನಸ್ತಾಪಕ್ಕೆ ಇದೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ… ಒಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಈ ರೀತಿಯ ಒಳಜಗಳಗಳು ಇದ್ದೆ ಇರುತ್ತವೆ.. ಈ ವಿವಾದಕ್ಕೆ ಯಾವ ರೀತಿ ತೆರೆ ಎಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ..
Comments