ಕ್ಯಾಪ್ಟನ್ ಧೋನಿ ನಡೆಗೆ ಫಿದಾ ಆದ ನಟಿ.!! ಯಾರ್ ಗೊತ್ತಾ..?

ಸದ್ಯ ಟೀಂ ಇಂಡಿಯಾ ವಿಶ್ವ ಕಪ್ ಸೋತ ವಿಚಾರದಲ್ಲಿ ಒಂದಿಷ್ಟು ತಲೆ ಕೆಡಿಸಿಕೊಂಡಿದ್ದು ಸುಳ್ಳಲ್ಲ.. ವಿಶ್ವಕಪ್ ಆದ ನಮ್ಮ ಆಟಗಾರರ ನಡುವೆಯೇ ಒಂದಿಷ್ಟು ಭಿನ್ನಾಭಿಪ್ರಾಯ ಎದ್ದಿದ್ದೆ.. ಈ ನಡುವೆ ಪಾಕ್ ನಟಿಯೋಬ್ಬರು ಎಂ ಎಸ್ ಧೋನಿಯನ್ನು ನೆನಪಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಆಟಗಾರ ಎಂ.ಎಸ್ ಧೋನಿ ಅವರು ನಡೆಗೆ ಪಾಕಿಸ್ತಾನದ ನಟಿ ಫಿದಾ ಆಗಿದ್ದಾರೆ. ಅದಷ್ಟೆ ಅಲ್ಲದೆ 1998ರಲ್ಲಿ ನಡೆದ ಒಂದು ಘಟನೆಯೊಂದು ಪಾಕ್ ನಟಿ ಸಂದರ್ಶನದ ಮೂಲಕ ಹಂಚಿಕೊಂಡಿದ್ದಾರೆ.
ಪಾಕಿಸ್ತಾನದ ನಟಿ ಮತಿರಾ ಖಾನ್ ಅವರು ಏಷ್ಯಾ ಕಪ್ ಸಂದರ್ಭದಲ್ಲಿ ಧೋನಿ ತಮ್ಮ ಜೊತೆ ಹೇಗೆ ನಡೆದುಕೊಂಡರು ಎಂಬುದನ್ನು ಸಂದರ್ಶನವೊಂದರಲ್ಲಿ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ತಂಡ ಉಳಿದುಕೊಂಡಿದ್ದ ಹೋಟಿಲಿನಲ್ಲಿಯೇ ಪಾಕಿಸ್ತಾನ ನಟಿ ಮತಿರಾ ಖಾನ್ ಕೂಡ ಇಳಿದುಕೊಂಡಿದ್ದರಂತೆ. ಆ ಸಮಯದಲ್ಲಿ ಮತಿರಾ ತಮ್ಮ ನೆಚ್ಚಿನ ಪಾಕಿಸ್ತಾನದ ಆಟಗಾರನ ಆಟೋಗ್ರಾಫ್ ಪಡೆಯಲು ಹೋಗಿದ್ದರಂತೆ. ನಟಿಗೆ ಕೆಲವು ಪಾಕಿಸ್ತಾನ ಕ್ರಿಕೇಟರ್ ಆಟೋಗ್ರಾಫ್ ಕೊಟ್ಟರಂತೆ.. ಆದರೆ ಮತ್ತೆ ಕೆಲವರು ಊಟ ಮಾಡೋದಕ್ಕೂ ಕೂಡ ಬಿಡೋದಿಲ್ಲ ಎಂದು ರೇಗಾಡಿದ್ದರಂತೆ... ಅವರು ನನ್ನ ಮೇಲೆ ರೇಗಾಡಿದ್ದರಿಂದ ನನ್ಮ ಮನಸ್ಸಿಗೆ ನೋವಾಗಿ ಅತ್ತುಬಿಟ್ಟಿದ್ದೆ. ಬಳಿಕ ನಾನು ನನ್ನ ಟೇಬಲ್ ಬಳಿ ಹೋಗುತ್ತಿದೆ. ಈ ವೇಳೆ ಭಾರತೀಯ ಕ್ರಿಕೆಟ್ ಆಟಗಾರರೊಬ್ಬರು ನಾವು ಕೂಡ ಕ್ರಿಕೆಟ್ ಆಟಗಾರರು. ನಮ್ಮ ಆಟೋಗ್ರಾಫ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ರಂತೆ.. ಆಗ ನಾನು ಹಿಂದೆ ತಿರುಗಿ ನೋಡಿದರೆ ಅದು ಮಹೇಂದ್ರ ಸಿಂಗ್ ಧೋನಿಯಂತೆ… ಅವರು ನನಗೆ ಆಟೋಗ್ರಾಫ್ ನೀಡಿ ಜೊತೆಗೆ ಪಕ್ಕ ಇದ್ದ ಸೀಟ್ ನಲ್ಲಿ ನನ್ನನ್ನು ಕೂರಿಸಿಕೊಂಡು ಮಾತಾನಾಡಿದರು ಎಂದು ಮತಿರಾ ಸಂದರ್ಶನದಲ್ಲಿ ಹೇಳಿದ್ದಾರೆ.. ಧೋನಿ ತುಂಬಾ ಒಳ್ಳೆಯ ವ್ಯಕ್ತಿ ಎಂದು ಕೂಡ ಹೇಳಿದ್ದಾರೆ.
Comments