ಸಾವಿಗೆ ಕಾರಣವಾಯ್ತ ವಿಶ್ವಕಪ್ ಗೆಲ್ಲದ ಟೀಂ ಇಂಡಿಯಾ..!!

ಐಸಿಸಿ ಏಕದಿನ ವಿಶ್ವಕಪ್ ಅನ್ನು ಇಂಗ್ಲೆಂಡ್ ಗೆಲುವನ್ನು ಸಾಧಿಸಿದೆ. ಭಾರತ ಫೈನಲ್ ಹಂತವನ್ನು ತಲುಪುತ್ತದೆ ಎಂದು ಆಸೆಯನ್ನು ಹೊಂದಿದ್ದ ಕ್ರಿಕೇಟ್ ಅಭಿಮಾನಿಗಳಿಗೆ ನಿರಾಸೆಯುಂಟಾಗಿತ್ತು. ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರನ್ನು ವಜಾಗೊಳಿಸಿ ರೋಹಿತ್ ಶರ್ಮಾ ಗೆ ನಾಯಕನ ಸ್ಥಾನ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಆದರೆ ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಬುಧವಾರ ಕರಾಳ ದಿನವಾಗಿತ್ತು.
ಎಸ್.. ಟೀಂ ಇಂಡಿಯಾ ಫೈನಲ್ ಪ್ರವೇಶ ಮಾಡುತ್ತೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿತ್ತು. ಭಾರತ ಸೋಲುತ್ತಿದ್ದಂತೆ ಕೆಲ ಅಭಿಮಾನಿಗಳು ಕಣ್ಣೀರಿಟ್ಟಿದ್ದರು. ಸೆಮಿಫೈನಲ್ ನಲ್ಲಿ ಭಾರತದ ಸೋಲು ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದೆ ಎಂಬ ಸುದ್ದಿಯೂ ಇದೀಗ ಎಲ್ಲೆಡೆ ಹರಡಿದೆ.. ಈ ಘಟನೆ ಬಿಹಾರದ ಕಿಶಾನಗಂಜ್ ನ ದುಮ್ಮರಿಯಾ ಮೊಹಲ್ಲಾದಲ್ಲಿ ನಡೆದಿದೆ. ಅಲ್ಲಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡ್ತಿದ್ದ ಅಶೋಕ್, ಕೆಲಸ ಮುಗಿಸಿ ಮನೆಗೆ ಬಂದ್ಮೇಲೆ ಕ್ರಿಕೆಟ್ ನೋಡ್ತಿದ್ದನಂತೆ. ಪಂದ್ಯ ಮುಗಿಯುತ್ತಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಹೃದಯಾಘಾತದಿಂದ ಅಶೋಕ್ ಸಾವನ್ನಪ್ಪಿದ್ದಾನೆಂದು ವೈದ್ಯರು ತಿಳಿಸಿದ್ದಾರೆ. ಟೀಂ ಇಂಡಿಯಾ ಸೋತಿದಕ್ಕೆ ಆತನಿಹೆ ಹೃದಯಾಘಾತವಾಘಿದೆ ಎನ್ನಲಾಗುತ್ತಿದೆ.. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸೋತಿದ್ದು ಅಭಿಮಾನಿಗಳಿಗೆ ಬೇಸರವನ್ನು ಮಾಡಿದೆ.
Comments