ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆದ ಇಂಗ್ಲೆಂಡ್..!!
ನೆನ್ನೆಯಷ್ಟೆ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿಶ್ವಕಪ್ ಗಾಗಿ ಸೆಣಸಾಟವನ್ನು ಮಾಡಿತ್ತು. ಸದ್ಯ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಇಂಗ್ಲೆಂಡ್ ತನ್ನದಾಗಿಸಿಕೊಂಡಿದೆ. ಸೂಪರ್ ಓವರಿನಲ್ಲಿ ನ್ಯೂಜಿಲೆಂಡ್ ತಂಡವನ್ನು ಕೊನೆಯ ಎಸೆತದಲ್ಲಿ ಮಣಿಸುವ ಮೂಲಕ ತವರು ನೆಲದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿ ಇಂಗ್ಲೆಂಡ್ ಹೊರ ಹೊಮ್ಮಿದೆ. ಮೊದಲ ಬ್ಯಾಟ್ ನಡೆಸಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿಕೊಂಡಿತ್ತು.. 241 ರನ್’ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಸಾಹಸದಿಂದ 50 ಓವರ್ ಗಳಲ್ಲಿ 241 ರನ್ ಗಳಿಗೆ ಆಲೌಟ್ ಆಯ್ತು. ಅಲ್ಲಿಗೆ ಪಂದ್ಯ ಡ್ರಾ ಆಯ್ತು..
ಪಂದ್ಯ ಡ್ರಾ ಆಗುವ ಮೂಲಕ ಪಂದ್ಯ ಟೈ ಆಗಿ ಫಲಿತಾಂಶಕ್ಕೆ ಮೊದಲ ಬಾರಿಗೆ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರಿನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಗಳಿಸಿಕೊಂಡಿತ್ತು... ನ್ಯೂಜಿಲೆಂಡ್ ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು.. ಅಷ್ಟರಲ್ಲಿ ಗುಪ್ಟಿಲ್ ರನ್ ಔಟ್ ಆದರು. ಟ್ರೆಂಟ್ ಬೌಲ್ಟ್ ಎಸೆದ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ಒಂದೊಂದು ಬೌಂಡರಿ ಹೊಡೆದಿದ್ದರು. ಎರಡು ತಂಡಗಳ ರನ್ ಸಮವಾಗಿದ್ದರೂ ಒಟ್ಟು 24 ಬೌಂಡರಿ ಸಿಡಿದ ಪರಿಣಾಮ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನ್ಯೂಜಿಲೆಂಡ್ 16 ಬೌಂಡರಿ ಹೊಡೆದಿತ್ತು. ಮೊದಲ ಬಾರಿಗೆ ಚಾಂಪಿಯನ್ನ ಪಟ್ಟವನ್ನು ತಗ್ಗದಾಗಿಸಿಕೊಂಡ ಖುಷಿಯಲ್ಲಿ ಇಂಗ್ಲೆಂಡ್ ಇದೆ.
Comments