ಬಾಂಗ್ಲಾ ಹುಲಿಗಳನ್ನು ಭೇಟೆಯಾಡಿದ ಟೀಂ ಇಂಡಿಯಾ..!!  

03 Jul 2019 9:52 AM | Sports
399 Report

ನೆನ್ನೆ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ  ಭಾರತ ಗೆದ್ದು ಇತಿಹಾಸದಲ್ಲೆ 6 ನೇ ಬಾರಿ ಸೆಮಿ ಫೈನಲ್ ಅನ್ನು ಪ್ರವೇಶ ಮಾಡಿದೆ.. ಸದ್ಯ ಕ್ರಿಕೇಟ್ ಅಭಿಮಾನಿಗಳು ಖುಷಯಾಗಿದ್ದಾರೆ.. ಬಾಂಗ್ಲದೇಶವನ್ನು 28 ರಂದು ಅಂತರದಿಂದ ಸೋಲಿಸಿದ ಟೀಂ ಇಂಡಿಯಾ ಸೆಮಿಪೈನಲ್ ಗೆ ಲಗ್ಗೆ ಇಟ್ಟಿದೆ. ಈಗಾಗಲೇ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶ ಮಾಡಿದ್ದು, ಭಾರತ ಎರಡನೇ ತಂಡವಾಗಿ ಹೊರ ಹೊಮ್ಮಿದೆ.

ಸದ್ಯ ಭಾರತ ಆಡಿರುವ ಒಟ್ಟು 8 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದೆ., ಒಂದೇ ಒಂದು ಪಂದ್ಯದಲ್ಲಿ ಸೋಲನ್ನು ಕಂಡಿದೆ.  ಒಂದು ಡ್ರಾ ಫಲಿತಾಂಶದೊಂದಿಗೆ 13 ಅಂಕ ಕಲೆ ಹಾಕಿಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಮೊದಲನೇ ಸ್ಥಾನದಲ್ಲಿ ಆಸ್ಟ್ರೇಲಿಯವಿದೆ.  ನೆನ್ನೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ರೋಹಿತ್ ಶರ್ಮ(104), ಕೆ.ಎಲ್ ರಾಹುಲ್(77) ನೆರವಿನಿಂದ 314 ರನ್ ಗಳಿಸಿದ್ದು, 315 ರನ್ ಗಳನ್ನು ಬಾಂಗ್ಲದೇಶಕ್ಕೆ  ಟಾರ್ಗೆಟ್ ನೀಡಿತ್ತು.  ಗೆಲುವಿಗೆ 315 ರನ್‌ಗಳ ಸವಾಲನ್ನು ಪಡೆದ ಬಾಂಗ್ಲಾದೇಶ 48 ಓವರ್‌ಗಳಲ್ಲಿ 286 ರನ್‌ಗಳಿಗೆ ಆಲೌಟಾಗಿ. ಸೆಮಿಫೈನಲ್‌ಗೆ ಹೋಗುವ ಅವಕಾಶವನ್ನು ಕಳೆದುಕೊಂಡಿದೆ. ಟೀಂ ಇಂಡಿಯಾ ಸೆಮಿಪೈನಲ್ ಗೆ ಹೋಗಿರುವುದು ಕ್ರಿಕೇಟ್ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.. ಈ ಬಾರಿ ವಿಶ್ವಕಪ್ ಗೆಲ್ಲಲ್ಲಿ ಎನ್ನುವುದು ಎಲ್ಲರ ಆಶಯ..

Edited By

Manjula M

Reported By

Manjula M

Comments