ಮೊದಲ ಬಾರಿಗೆ ಮುಗ್ಗರಿಸಿದ ಟೀಂ ಇಂಡಿಯಾ...

ಈ ಬಾರಿಯ ವಿಶ್ವಕಪ್ ನಲ್ಲಿ ಕೊಹ್ಲಿ ಪಡೆ ನಾಗಲೋಟದಿಂದ ಮುನ್ನುಗುತ್ತಿತ್ತು.. ಆದರೆ ಇದೀಗ ಆ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದಂತಾಗಿದೆ.ನೆನ್ನೆ ನಡೆದ ಪಂದ್ಯದಲ್ಲಿ ಭಾರತ ಸೋಲಿನ ರುಚಿ ಕಂಡಿದೆ. ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಮುನ್ನಡೆಯುತ್ತಿದ್ದ ಭಾರತ ತಂಡ ಮೊದಲ ಬಾರಿಗೆ ಸೋತಿದೆ.
2019ರ ಟೂರ್ನಿಯಲ್ಲಿ ಭಾರತ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನದ ವಿರುದ್ಧ ಜಯಗಳಿಸಿದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಒಂದು ಎಸೆತ ಕಾಣದೇ ರದ್ದಾಗಿತ್ತು.ಭಾರತಕ್ಕೆ ಇನ್ನೂ ಪಂದ್ಯಗಳಿವೆ. ಈ ಎರಡರ ಪೈಕಿ ಒಂದು ಪಂದ್ಯವನ್ನು ಗೆದ್ದರೂ ಕೂಡ ಭಾರತ ಸೆಮಿ ಫೈನಲ್ ಪ್ರವೇಶ ಪಡೆಯಲಿದೆ. ನೆನ್ನೆ ನಡೆದ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಭಾರತ ಮೊದಲ ಬಾರಿಗೆ ಸೋಲು ಕಂಡಿದೆ. ಇದರಿಂದ ಕ್ರಿಕೇಟ್ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ಇಷ್ಟು ದಿನ ಗೆಲುವಿನ ಸಂಭ್ರಮದಲ್ಲಿದ್ದ ಭಾರತ ಸದ್ಯ ಸೋಲನ್ನು ಕಂಡಿದೆ. ಮುಂಬರುವ ದಿನಗಳಲ್ಲಿ ಭಾರತ ಫೈನಲ್ ಗೆ ಲಗ್ಗೆ ಇಟ್ಟು ಮುಂಬರುವ ದಿನಗಳಲ್ಲಿ ವಿಶ್ವ ಕಪ್ ಅನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹೆಚ್ಚಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
Comments