ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸಿಕ್ತು ಭರ್ಜರಿ ಗೆಲುವು
ನೆನ್ನೆ ನಡೆದ ಐಸಿಸಿ ವಿಶ್ವಕಪ್ 2019 ರ ಮ್ಯಾಚ್ ನಲ್ಲಿ ಭಾರತ ಜಯಸಾಧಿಸಿದೆ.. ಇದರಿಂದ ಅಬಿಮಾನಿಗಳು ಖುಷಿಯಾದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 36 ರನ್ ಗಳ ಭರ್ಜರಿ ಜಯ ಗಳಿಸಿತ್ತು.. . ಕೆನ್ನಿಂಗ್ ಟನ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಸಂಪಾದಿಸಿಕೊಂಡಿತ್ತು…
ಶಿಖರ್ ಧವನ್ (117), ರೋಹಿತ್ ಶರ್ಮಾ (57), ನಾಯಕ ವಿರಾಟ್ ಕೊಹ್ಲಿ (82) ಹಾರ್ದಿಕ್ ಪಾಂಡ್ಯ (48) ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 50 ಓವರ್ ಗಳಲ್ಲಿ 352 ರನ್ ಗಳ ಬೃಹತ್ ರನ್ ಗಳನ್ನೆ ಸಂಪಾದಿಸಿಕೊಂಡಿತ್ತು.. ಟೀಂ ಇಂಡಿಯಾ ನೀಡಿದ ಬೃಹತ್ ಮೊತ್ತದ ಬೆನ್ನಟ್ಟಿದ ಆಸ್ಟ್ರೇಲಿಯಾ 63 ರನ್ ಗಳಿಸುತ್ತಿದ್ದಂತೆಯೇ ಒಂದು ವಿಕೇಟ್ ಕಳೆದುಕೊಂಡಿತ್ತು. ಆಸೀಸ್ ಪರ ಡೇವಿಡ್ ವಾರ್ನರ್ (56), ಸ್ಟಿವನ್ ಸ್ಮಿತ್ (69) ಹಾಗೂ ಅಲೆಕ್ಸ್ ಕ್ಯಾರಿ (55) ಅರ್ಧಶತಕಗಳ ಹೊರತಾಗಿಯೂ ಆಸೀಸ್ 316 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಟೀಂ ಇಂಡಿಯಾ ವಿರುದ್ದ ಸೋಲನ್ನು ಅನುಭವಿಸಿತ್ತು. ಈ ಮೂಲಕ ಟೀಂ ಇಂಡಿಯಾ ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಸತತ 2 ನೇ ಗೆಲುವು ದಾಖಲಿಸಿದೆ.
Comments