ಪ್ರಸಿದ್ಧ ಕ್ರಿಕೆಟಿಗನ 2 ವರ್ಷದ ಪುತ್ರಿ ಸಾವು…!

20 May 2019 4:18 PM | Sports
1261 Report

ಇತ್ತಿಚಿಗೆ ನಟನ ಮಗಳೊಬ್ಬಳು ಆಟಿಕೆ ನುಂಗಿ ಸಾವಿಗೀಡಾಗಿದ್ದು ಎಲ್ಲರಿಗೂ ಕೂಡ ತಿಳಿದೆ ಇದೆ..ಇದೀಗ ಪಾಕಿಸ್ತಾನದ ಖ್ಯಾತ ಕ್ರಿಕೇಟರ್ ನ ಎರಡು ವರ್ಷದ ಮಗಳು ಮೃತಪಟ್ಟಿದ್ದಾಳೆ… ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಆಸಿಫ್ ಅಲಿಯವರ ಎರಡು ವರ್ಷದ ಪುತ್ರಿ ನೂರ್ ಫಾತಿಮಾ, ನಾಲ್ಕನೇ ಹಂತದ ಕ್ಯಾನ್ಸರ್ ಚಿಕಿತ್ಸೆ ಬಳಿಕ ಅಮೆರಿಕದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಪುತ್ರಿಯ ನಿಧನವಾದ  ಹಿನ್ನೆಲೆಯಲ್ಲಿ ಆಸಿಫ್ ಅಲಿ ಇಂಗ್ಲೆಂಡ್ ಪ್ರವಾಸವನ್ನು ಕೈ ಬಿಡಲಿದ್ದಾರೆ..

ಇಸ್ಲಾಮಾಬಾದ್ ಯುನೈಟೆಡ್ ತಂಡ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪುತ್ರಿಯನ್ನು ಕಳೆದುಕೊಂಡ ಆಸಿಫ್ ಅಲಿ ಯವರಿಗೆ ಐಎಸ್‍ಎಲ್‍ಯು ಸಾಂತ್ವನ ಹೇಳುತ್ತಿದೆ. ಆಸಿಫ್ ಹಾಗೂ ಅವರ ಕುಟುಂಬಕ್ಕಾಗಿ ನಮ್ಮ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸೋಣ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ" ಎಂದು ತಿಳಿಸಿದೆ.. ಇದಕ್ಕೂ ಮೊದಲು ಭಾನುವಾರ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದ ಐದನೇ ಹಾಗೂ ಕೊನೆಯ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ 54 ರನ್‍ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 27 ವರ್ಷದ ಆಸಿಫ್ ಅಲಿ 22 ರನ್ ಗಳಿಸಿದ್ದರು. ಇದೀಗ ಮಗಳನ್ನು ಕಳೆದುಕೊಂಡಿರುವ ದುಃಖದಲ್ಲಿ ಇದ್ದಾರೆ.. ದುಃಖವನ್ನು ಭರಿಸುವ ಶಕ್ತಿ ಕುಟುಂಬಕ್ಕೆ ಕೊಡಲಿ ಎಂದು ಎಲ್ಲರು ಪ್ರಾರ್ಥಿಸೋಣ…

Edited By

Manjula M

Reported By

Manjula M

Comments