ವಿರಾಟ್ ಕೊಹ್ಲಿ ರಹಸ್ಯ ವಿಡಿಯೋ ವೈರಲ್ ಮಾಡಿದ ರಿಷಬ್ ಪಂತ್..!!
ಐಪಿಎಲ್ ಅಭಿಮಾನಿಗಳಿಗೆ ಈ ಬಾರಿಯೂ ಕೂಡ ಆರ್ ಸಿ ಬಿ ನಿರಾಸೆಯನ್ನುಂಟು ಮಾಡಿದೆ. ಈ ಸಲ ಕಪ್ ನಮ್ದೆ ಎನ್ನುತ್ತಿದ್ದ ಅಭಿಮಾನಿಗಳಿಗೆ ಬೇಸರವಾಗಿದೆ.. ವಿಶ್ವಕಪ್ 2019 ರ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಆರ್ ಸಿ ಬಿ ವಿಫಲವಾಗಿತ್ತು.. ಇದೀಗ ವಿಫಲರಾದ ರಿಷಬ್ ಪಂತ್, ನಾಯಕ ವಿರಾಟ್ ಕೊಹ್ಲಿ ಜೊತೆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಒಟ್ಟಿಗೆ ಸೇರಿ ಡ್ಯಾನ್ಸ್ ಮಾಡಿರುವ ವಿಡಿಯೋ ಇದಾಗಿದ್ದು ರಿಷಬ್ ಪಂತ್ ವಿಡಿಯೋವನ್ನು ತಮ್ಮ ಟ್ವೀಟರ್ ನಲ್ಲಿ ಷೇರ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಈ ವಿಡಿಯೋ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅಭಿಮಾನಿಗಳು ಇದರ ಬಗ್ಗೆ ಕೇಳುತ್ತಿದ್ದರು ಕೊಹ್ಲಿ ಯಾವುದೇ ಪ್ರತಿಕ್ತಿಯೆ ನೀಡುತ್ತಿಲ್ಲ..ಅಷ್ಟೆ ಅಲ್ಲದೆ ಕೊಹ್ಲಿ ಈ ಬಗ್ಗೆ ಯಾರಿಗೂ ಹೇಳಬೇಡ ಎಂದು ತಿಳಿಸಿದ್ದರು. . ಆದರೆ ನನಗೆ ನನ್ನ ಉತ್ಸಾಹವನ್ನು ತಡೆಹಿಡಿಯಲು ಸಾಧ್ಯವಾಗ್ತಿಲ್ಲ. ದಯವಿಟ್ಟು ಹೆಚ್ಚಿನ ಮಾಹಿತಿಗೆ ಕೊಹ್ಲಿ ಟ್ವೀಟರ್ ಪರಿಶೀಲಿಸಿ ಎಂದು ರಿಷಬ್ ಪಂತ್ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಹ್ಲಿ ಮೇ 16 ರಂದು ನೀಡ್ತಾರೆಂದು ರಿಷಬ್ ಪಂತ್ ತಿಳಿಸಿದ್ದಾರೆ. ರಿಷಬ್ ಪಂತ್ ಹಾಗೂ ಕೊಹ್ಲಿ ಜುಗಲ್ ಬಂದಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಇಷ್ಟಕ್ಕೂ ಕೊಹ್ಲಿ ಮುಚ್ಚಿಟ್ಟಿರುವ ವಿಷಯವೇನು ಎಂಬುದರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
Comments