ಧೋನಿ ಕೊನೆ ಪಂದ್ಯ ಇದೇನಾ..!! ತಂಡದ ಉಪನಾಯಕ ಕೊಟ್ಟ ಸುಳಿವೇನು..?
ಐಪಿಎಲ್ ಪೀವರ್ ಹೆಚ್ಚಾಗಿಯೇ ಇದೆ.. ಅದರಲ್ಲಿ ಸಿಎಸ್ಕೆ ಗೆ ಹೆಚ್ಚು ಅಭಿಮಾನಿಗಳು ಇರೋದು ಅನ್ಸುತ್ತೆ.. ಧೋನಿ ಬ್ಯಾಟ್ ಹಿಡಿದು ಫೀಲ್ಡ್ ಗೆ ಎಂಟ್ರಿ ಕೊಟ್ರು ಅಂದ್ರೆ ಸಾಕು ಅಭಿಮಾನಿಗಳು ಸ್ಟೇಡಿಯಂ ನಲ್ಲಿ ಹುಚ್ಚೆದ್ದು ಕುಣಿಯುತ್ತಾರೆ. ಆದರೆ ಇದೀಗ ಎಸ್ ಎಂ ಧೋನಿ ಮುಂದಿನ ಐಪಿಎಲ್ ವೇಳೆಗೆ ನಿವೃತ್ತಿ ಘೋಷಣೆ ಮಾಡ್ತಾರ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇದಕ್ಕೆ ಏನಪ್ಪಾ ಕಾರಣ ಅಂತಿರಾ..
ಎಂ.ಎಸ್.ಧೋನಿ ಈ ಆವೃತ್ತಿ ಬಳಿಕ ಐಪಿಎಲ್‌ಗೆ ವಿದಾಯ ಘೋಷಿಸುತ್ತಾರಾ?. ಈ ರೀತಿ ಕುತೂಹಲ ಇದೀಗ ಎಲ್ಲೆಡೆ ಪ್ರಾರಂಭವಾಗಿದೆ.. ಬುಧವಾರ ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದ ನಂತರ ತಂಡದ ಉಪನಾಯಕ ಸುರೇಶ್ ರೈನಾ ನೀಡಿದ ಹೇಳಿಕೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ ಎನ್ನಬಹುದಾಗಿದೆ. ಈಗಾಗಲೇ ಅನಾರೋಗ್ಯದ ಕಾರಣದಿಂದಾಗಿ ಈ ವರ್ಷ ಧೋನಿ ಎರಡು ತಂಡಗಳನ್ನು ತಪ್ಪಿಸಿಕೊಂಡಿದ್ದರು. ಧೋನಿ ಇಲ್ಲದಿದ್ದಲಿ ತಂಡ ನಡೆಸುವುದು ಕಷ್ಟ ಎಂಬುದನ್ನು ತಂಡದ ಉಪ ನಾಯಕ ರೈನಾ ಹೇಳಿಕೊಂಡಿದ್ದಾರೆ. ಧೋನಿ ಪಂದ್ಯದಲ್ಲಿ ಇಲ್ಲದಿದ್ದರೆ ಒಬ್ಬ ಉತ್ತಮ ಬ್ಯಾಟ್ಸ್ ಮನ್ ಕೊರತೆ ಎದುರಾಗಲಿದೆ.. ಧೋನಿ ನನಗೆ ಉತ್ತಮ ಮಾರ್ಗ ದರ್ಶಕರಾಗಿದ್ದಾರೆ. ಅವರು ತೆರೆ ಮರೆಗೆ ಸರಿದ ನಂತರ ಮುಂದಿನ ವರ್ಷ ನನ್ನನ್ನು ನಾಯಕನಾಗಿ ನೋಡಲಿದ್ದೀರಿ ಎಂದು ಸುರೇಶ್ ರೈನಾ ತಿಳಿಸಿದ್ದಾರೆ. 2019ರ ಏಕದಿನ ವಿಶ್ವಕಪ್ ಬಳಿಕ ಧೋನಿ ಕ್ರಿಕೆಟ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸುವ ನಿರೀಕ್ಷೆ ಇದೆ. ರೈನಾ ಅದರ ಸುಳಿವು ನೀಡಿದ್ದಾರೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ಒಟ್ಟಾರೆಯಾಗಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿರುವ ಧೋನಿ ನಿವೃತ್ತಿ ತೆಗೆದುಕೊಳ್ಳುತ್ತಾರೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
Comments