ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಎಂ ಎಸ್ ಧೋನಿ..!! ಕಾರಣ ಏನ್ ಗೊತ್ತಾ..?

ಐಪಿಎಲ್ ನಲ್ಲಿ ಬ್ಯುಸಿಯಿರುವ ಧೋನಿ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ… ಐಪಿಎಲ್ ಆಡೋದನ್ನ ಬಿಟ್ಟು ಧೋನಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದು ಯಾಕೆ ಅಂತಾ ಯೋಚನೆ ಮಾಡುತ್ತಿದ್ದೀರಾ..? ರಿಯಲ್ ಎಸ್ಟೇಟ್ ಸಮೂಹ ಆಮ್ರಪಾಲಿ ಯೋಜನೆಯಲ್ಲಿನ ಪೆಂಟ್‌ಹೌಸ್ ಅನ್ನು ವಶಕ್ಕೆ ನೀಡುವಂತೆ ಮತ್ತು ಆಮ್ರಪಾಲಿ ಸಮೂಹದ ಸಾಲದಾತರ ಪಟ್ಟಿಯಲ್ಲಿ ತನ್ನ ಹೆಸರನ್ನು ಕೂಡ ಸೇರಿಸುವಂತೆ ಕೋರಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಆಮ್ರಪಾಲಿ ಸಮೂಹಕ್ಕೆ ಬ್ರಾಂಡ್ ಅಂಬಾಸಡರ್ ಆಗಿ ಕಾರ್ಯ ನಿರ್ವಹಿಸಿರುವುದಕ್ಕೆ ಬಾಕಿ ಇರುವ 40 ಕೋಟಿ ರೂಪಾಯಿಯನ್ನು ಪಾವತಿಸುವಂತೆ ಆಮ್ರಪಾಲಿ ಸಮೂಹಕ್ಕೆ ನಿರ್ದೇಶನ ನೀಡುವಂತೆ ಕೋರಿ ಧೋನಿ ಕಳೆದ ತಿಂಗಳು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. 2009-2016ರ ವರೆಗೆ ರಿಯಲ್ ಎಸ್ಟೇಟ್ ಕಂಪೆನಿಯ ಬ್ರಾಂಡ್ ಅಂಬಾಸಡರ್ ಆಗಲು ಧೋನಿ ಒಪ್ಪಿಗೆಯನ್ನು ನೀಡಿದ್ದರು.. ಆದರೆ ನಿರ್ಮಾಣ ಪ್ರಚಾರದ ಹಲವು ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ, ಆಮ್ರಪಾಲಿ ಸಮೂಹ ಮಾತ್ರ ಆರ್ಥಿಕ ಸಮಸ್ಯೆಯಲ್ಲಿ ನಡೆಯುತ್ತಿತ್ತು. ಧೋನಿಯವರು ನನಗೆ ಬರಬೇಕಾದ ಹಣವನ್ನು ಕೊಡಿಸಬೇಕು ಎಂದು ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದಾರೆ.
Comments