ಮಧ್ಯರಾತ್ರಿ ಹೆಂಡತಿಯನ್ನು ಮನೆಯಿಂದ ಹೊರ ಹಾಕಿದ ಕ್ರಿಕೆಟಿಗ : ಮಾಧ್ಯಮಗಳ ಎದುರೇ ನಡೆಯಿತು ಹೈಡ್ರಾಮ...!!!

ಗಂಡ-ಹೆಂಡತಿ ಜಗಳ ಬೀದಿಗೆ ಬಂತು ಅನ್ನೋವಾಗೇ ಕ್ರಿಕೆಟರ್ ಮೊಹಮ್ಮದ್ ಶಮಿ ಮತ್ತು ಆತನ ಪತ್ನಿ ಹಸೀದ್ ವಿವಾದ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಅಂದಹಾಗೇ ಶಮಿ ಮತ್ತು ಹಸೀನ್ ನಡುವೆ ಜಗಳ ಇದೇನು ಹೊಸದಲ್ಲ. ಆದರೆ ಶಮಿಯಿಂದ ದೂರವಾಗಿದ್ದ ಹಸೀನ್ ಇದ್ದಕ್ಕಿದ್ದ ಹಾಗೇ ಶಮಿ ಮನೆಗೆ ಬಂದಿದ್ದಾರೆ. ಭಾನುವಾರ ಹಸೀನ್ ಜಹಾನ್, ಶಮಿ ಅಮ್ರೋಹಾ ಜಿಲ್ಲೆಯ ಗ್ರಾಮ ಸಹಸ್ಪುರ್ ಅಲಿನಗರ್ ಗೆ ಬಂದಿದ್ದರು. ಶಮಿ ತಮ್ಮ ತಂದೆ ತಾಯಿಗಾಗಿ ಮಾಡಿದ್ದ ಮನೆಯಲ್ಲಿ ಪೋಷಕರು ಈಗಾಗಲೇ ವಾಸವಾಗಿದ್ದರು.
ಆದರೆ ಶಮಿ ಹೆಂಡತಿ ಬಂದು ಶಮಿ ತಂದೆ ತಾಯಿ ಇದ್ದ ಮನೆಯನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ್ದರಂತೆ. ಆದ್ರೆ ಶಮಿ ಮೊದಲೇ ಇದಕ್ಕೆ ಸಿದ್ಧರಾಗಿದ್ದರು. ಮಧ್ಯರಾತ್ರಿ ಪೊಲೀಸ್ ಕರೆಯಿಸಿ, ಹಸೀನ್ ರನ್ನು ಮನೆಯಿಂದ ಹೊರ ಹಾಕಿದ್ದಾರೆ.ನಾನು ಮಾವನ ಮನೆಗೆ ಬಂದರೆ ಪೊಲೀಸರನ್ನು ಕರೆಸಿ ಮನೆಯಿಂದ ಹೊರ ಹಾಕಿದ್ದಾರೆ. ಮಧ್ಯರಾತ್ರಿ 12 ಗಂಟೆ ಆಗಿದೆ, ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಪೊಲೀಸರ ವಿರೋಧದ ನಡುವೆಯೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ ಹಸೀನ್. ನಾನೇನು ಅಪರಾಧ ಮಾಡಿದ್ದೀನಿ . ನನ್ನನ್ನು ಪೊಲೀಸ್ ಠಾನೆಗೆ ಕರೆ ತಂದಿದ್ದಾರೆ.ಮಧ್ಯರಾತ್ರಿ ಯಾವುದೇ ಹುಡುಗಿಯನ್ನು ಪೊಲೀಸ್ ಠಾಣೆಗೆ ಕರೆತರುವಂತಿಲ್ಲ. ಮೊಬೈಲ್ ತೆಗೆದಿಟ್ಟುಕೊಂಡಿದ್ದಾರೆಂದು ಹಸೀನ್ ದೂರಿದ್ದಾರೆ. ನಾನು ಮದುವೆಯಾದಗೂ ಈ ಮನೆಗೆ ಬಂದಿದ್ದೇನೆ, ಮಕ್ಕಳ ಜೊತೆ ಅನೇಕ ಬಾರಿ ಈ ಮನೆಗೆ ಬಂದು ಹೋಗಿದ್ದೇನೆ. ಆದರೆ ಪತಿ ನಿರ್ಮಿಸಿದ ಮನೆಯಲ್ಲಿ ರಾತ್ರಿ ಮಲಗಿದ್ದಾಗ ಬೆದರಿಸಿ ನನ್ನನ್ನು ಹೊರ ಹಾಕಿದ್ದಾರೆಂದು ಹಸೀನ್ ತಿಳಿಸಿದ್ದಾರೆ.
Comments