ಹ್ಯಾಟ್ರಿಕ್ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು..
ನೆನ್ನೆ ನಡೆದ ಪಂದ್ಯ ನಿಜಕ್ಕೂ ಆರ್ ಸಿ ಬಿ ಫ್ಯಾನ್ಸ್ ಗಳಿಗಂತೂ ಫುಲ್ ಖುಷಿಯಾಗಿರುತ್ತದೆ… ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹ್ಯಾಟ್ರಿಕ್ ಜಯವನ್ನ ಸಾಧಿಸಿದೆ..
ಟಾಸ್ ಸೋತು ಮೊದಲಿಗೆ ಫೀಲ್ಡ್ ಗೆ ಇಳಿದು ಬ್ಯಾಟಿಂಗ್ ನಡೆಸಿದ ಆರ್.ಸಿ.ಬಿ. ಉತ್ತಮ ಪ್ರದರ್ಶನವನ್ನು ತೋರಿಸಿತ್ತು… ಆರ್ ಸಿ ಬಿ ಪರವಾಗಿ ಎಬಿ ಡಿ'ವಿಲಿಯರ್ಸ್ ಅಜೇಯ 82 ರನ್ ಗಳಿಸಿದ್ದಾರೆ. 44 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಒಳಗೊಂಡಂತೆ 82 ರನ್ ಗಳಿಸಿದರು.. ಪಾರ್ಥಿವ್ ಪಟೇಲ್ 43, ಮಾರ್ಕಸ್ ಸ್ಟೋಯ್ನಿಸ್ ಅಜೇಯ 46 ರನ್ ಗಳಿಸಿದ್ದು, ಆರ್.ಸಿ.ಬಿ. 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು… 202 ರ ಗೆಲುವಿನ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ 185 ರನ್ ಗಳಿಕೆಗೆ ನಿಂತು ಹೋಯಿತು.. . 17 ರನ್ ಅಂತರದಿಂದ ಆರ್.ಸಿ.ಬಿ. ಗೆಲುವು ಪಡೆದುಕೊಂಡಿತು.. . ಇದರೊಂದಿಗೆ ಹ್ಯಾಟ್ರಿಕ್ ಗೆಲವು ದಾಖಲಿಸಿರುವ ಆರ್.ಸಿ.ಬಿ. ಪ್ಲೇ ಆಫ್ ಪ್ರವೇಶ ಸಾಧ್ಯತೆಯನ್ನು ಇನ್ನೂ ಕೂಡ ಜೀವಂತವಾಗಿರಿಸಿದೆ. ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿ ಆರ್ ಸಿ ಬಿ ಇದೀಗ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಕೊನೆಯಲ್ಲಿ ಎಬಿಡಿ ಬಾರಿಸಿದ ಸಿಕ್ಸ್’ಗಳಿಗೆ ಇಡೀ ಸ್ಟೇಡಿಯಂನಲ್ಲಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಖುಷಿಗೆ ಪಾರವೇ ಇಲ್ಲದಂತೆ ಆಯಿತು.. ಈ ಸಲ ಕಪ್ ನಮ್ದೆ ಎನ್ನುವ ಕನಸನ್ನ ಆರ್ ಸಿ ಬಿ ನನಸು ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Comments