ಗರ್ಭಿಣಿಯಾದ ಮೇಲೆ ಮದುವೆಗೆ ರೆಡಿಯಾದ್ರು 'ದಿ ವಿಲನ್' ನಾಯಕಿ....!!!

ಅಂದಹಾಗೇ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾದ ನಾಯಕಿ ಆ್ಯಮಿ ಜಾಕ್ಸನ್ ಹಸೆಮಣೆಗೆ ಏರಲು ಸಿದ್ಧರಾಗಿದ್ದಾರೆ. ಅಷ್ಟಕ್ಕೂ ಇದರಲ್ಲಿ ವಿಶೇಷತೆ ಏನಪ್ಪಾ ಅಂದ್ರೆ.. ಮೊದಲು ತಾಯ್ತನದ ಖುಷಿಯನ್ನು ಅನುಭವಿಸಿದ ನಂತರ ಹಸೆಮಣೆಗೆ ಏರುತ್ತಿರುವ ನಾಯಕಿ ಇವರು. ಆ್ಯಮಿ ಜಾಕ್ಸನ್ ಕನ್ನಡದ ದಿ ವಿಲನ್ ಸಿನಿಮಾದಲ್ಲಿ ನಟಿಸಿ ಬಹಳ ಹೆಸರಾದವರು. ಮಾಡಿದ್ದು ಒಂದೇ ಸಿನಿಮಾವಾದ್ರು ದಿ ವಿಲನ್ ಅಬ್ಬರಕ್ಕೆ ಇನ್ನು ಕನ್ನಡಿಗರ ಮನದಲ್ಲುಳಿದಿದ್ದಾರೆ ಆ್ಯಮಿ ಜಾಕ್ಸನ್.
ಮೇ 5 ರಂದು ತಮ್ಮ ಪ್ರಿಯಕರ ಜಾರ್ಜ್ ಪೆನಯಿಟ್ಟೊ ಜತೆ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ. ಲವ್, ಡೇಟಿಂಗ್ ಅಂತಾ ಸುತ್ತಾಡುತ್ತಿದ್ದ ಆ್ಯಮಿ ಜಾಕ್ಸನ್ ಸದ್ಯ ಮದುವೆ ಯೋಚನೆ ಮಾಡಿದ್ದಾರಂತೆ. ಕಳೆದೆರಡು ವರ್ಷಗಳಿಂದ ಡೇಟಿಂಗ್ ಅಂತ ಸುತ್ತಾಡುತ್ತಿದ್ದ ಜೋಡಿ ಇದೀಗ ವಿವಾಹ ಬಂಧನಕ್ಕೆ ಒಳಗಾಗುತ್ತಿದೆ. ಜಾರ್ಜ್ ಜೊತೆ ಡೇಟಿಂಗ್ ನಲ್ಲಿದ್ದ ಆ್ಯಮಿ ಸದ್ಯ ಗರ್ಭಿಣಿ. ಅಯ್ಯೋ..ಮದುವೆಗೂ ಮುನ್ನವೇ ಗರ್ಭಿಣಿಯಾದ ಹೀರೋಯಿನ್ ಅಂತಾನೂ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು. ತಾನು ಮದುವೆಯಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಾನು ಗರ್ಭಿಣಿ ಆದ ವಿಷಯವನ್ನು ಕೂಡ ಅವರೇ ಹೇಳಿ ನನಗೆ ಈ ಅನುಭವ ಹೊಸದು, ತುಂಬಾ ಖುಷಿ ಕೊಡುತ್ತಿದೆ ಎಂದು ಬರೆದುಕೊಂಡಿದ್ದರು. ಲಂಡನ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ, ವಿವಾಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿಸಲಾಗಿದೆ. ಅಷ್ಟಕ್ಕೂ ಆ್ಯಮಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾಳೆಂದು ಬಹಳವೇ ಟ್ರೋಲ್ ಆಗಿದ್ದರು. ಒಟ್ಟಾರೆ ಆ್ಯಮಿ ಅಭಿಮಾನಿಗಳು ಮಗು ಮಡಿಲು ಸೇರುವ ಮುನ್ನವೇ ಮದುವೆಯಾಗುತ್ತಿರುವ ತಮ್ಮ ಸ್ಟಾರ್ ಹೀರೋಯಿನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Comments