ಐದು ವರ್ಷಗಳ ಹಿಂದೆಯೇ ಅಕೆಗಾಗಿ ಕಾಯುತ್ತಿದ್ದರಂತೆ ವಿರಾಟ್ ಕೊಹ್ಲಿ : ಅವಳು ಅನುಷ್ಕಾ ಅಲ್ಲಾ ಹಾಗಾದ್ರೆ ಯಾರು….?!!!
ಅಂದಹಾಗೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮಹಿಳಾ ಅಭಿಮಾನಿಗಳೇ ಹೆಚ್ಚು. ಕ್ರೀಡಾಂಗಣದಲ್ಲಂತೂ ಕೊಹ್ಲಿ ಕಾಲಿಟ್ಟರೇ ಐ ಲವ್ ಯೂ ಕೊಹ್ಲಿ ಎನ್ನೋ ಪೋಸ್ಟರ್ ಗಳೇ ಹೆಚ್ಚು ರಾರಾಜಿಸುತ್ತಿರುತ್ತವೆ. ಇದೇನು ಹೊಸ ಸುದ್ದಿ ಅಲ್ಲಾ ಬಿಡಿ. 2017 ರಲ್ಲಿ ಲವ್, ಡೇಟಿಂಗ್ ಎಲ್ಲಾ ಮುಗಿಸಿ ಬ್ಯಾಚುಲರ್ ಲೈಫ್ ಗೆ ವಿದಾಯ ಹೇಳಿ ತನ್ನ ಮನದಾಕೆ ಅನುಷ್ಕಾ ಶರ್ಮಾರನ್ನು ಮದುವೆಯಾದ ಮೇಲಂತೂ ಮಹಿಳಾ ಅಭಿಮಾನಿಗಳು ಕೋಪಗೊಂಡಿದ್ದೂ ನಿಜ. ಆದ್ರೂ ಕೊಹ್ಲಿಗಿರೋ ಡಿಮ್ಯಾಂಡ್ ಕೊಂಚವೂ ಕಡಿಮೆಯಾಗಿಲ್ಲ ಅನ್ನೋದು ಗೊತ್ತಿರೋ ಸಂಗತಿ.
ಅದೆಷ್ಟೋ ಜನ ಒಮ್ಮೆಯಾದ್ರೂ ಕೊಹ್ಲಿಯನ್ನ ಮೀಟ್ ಮಾಡೋ ಚಾನ್ಸ್ ಸಿಕ್ಕಿದ್ರೆ ಸಾಕು ದೇವರೆ ಅಂತಾ ಕಾಯ್ತಾ ಇದ್ದಾರೆ.ಆದ್ರೆ ವಿರಾಟ್ ಕೊಹ್ಲಿ ಮಾತ್ರ ಕೆಲ ವರ್ಷಗಳ ಹಿಂದೆ ಒಬ್ಬ ಮಹಿಳೆಯನ್ನ ಭೇಟಿಯಾಗಬೇಕು, ಅವರ ಜೊತೆ ಒಂದಷ್ಟು ಮಾತು ಕತೆ ನಡೆಸ ಬೇಕು ಅಂತ ಸಿಕ್ಕಾಪಟ್ಟೆ ಕಾದಿದ್ದರಂತೆ. ಈ ವಿಷಯ ಈಗ ಭಾರೀ ಚರ್ಚೆಯಾಗುತ್ತಿದೆ. ಆದ್ರೆ, ಕೆಲವರು ಈ ವಿಚಾರ ಕೇಳುತಿದ್ದಂತೇ ಆ ಮಹಿಳೆ ಬೇರೆ ಯಾರು ಅಲ್ಲಾ…ಆ ಲೇಡಿ ಅನುಷ್ಕಾನೇ ಎಂದು ಇಮಾಜಿನೇಷನ್ ಮಾಡುತ್ತಿದ್ದರೇ ನಿಮ್ಮ ಊಹೆ ಖಂಡಿತಾ ಸುಳ್ಳು. ಆಕೆ ಅನುಷ್ಕಾ ಅಲ್ಲಾ….5 ವರ್ಷಗಳ ಹಿಂದೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸಾರಾ ಟೇಯ್ಲರ್ ಅವರನ್ನ ಭೇಟಿ ಮಾಡುವ ಆಸೆ ಕೊಹ್ಲಿಗಿತ್ತಂತೆ. ನನ್ನ ಭೇಟಿಗಾಗಿ ವುಮೆನ್ ಫೇವರಿಟ್ ಸ್ಟಾರ್ ಕೊಹ್ಲಿ ನನಗಾಗಿ ಕಾಯುತ್ತಿದ್ದರು ಎಂದು… ಇಂಗ್ಲೆಂಡ್ ಆಟಗಾರ್ತಿ ಕೇಟ್ ಕ್ರಾಸ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಕೊಹ್ಲಿ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿ ಸಾರಾ ಹಾಗೂ ಕೊಹ್ಲಿಗೆ ಟ್ಯಾಗ್ ಮಾಡಿದ್ದಾರೆ.
Comments