CSK ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್

ಈಗಾಗಲೇ ಐಪಿಎಲ್ ಪ್ರಾರಂಭವಾಗಿದೆ.. ಗೆಲುವಿನ ನಾಗಾಲೋಟದಲ್ಲಿ ಓಡುತ್ತಿದ್ದ ಸಿಎಸ್’ಕೆ ಗೆಲುವಿಗೆ ಬ್ರೇಕ್ ಬಿದ್ದಿದೆ.. ನೆನ್ನೆ ನಡೆದ ಪಂದ್ಯದಲ್ಲಿ ಸಿಎಸ್’ಕೆ ಮುಗ್ಗರಿಸಿದೆ. CSK ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 37 ರನ್ ಗೆಲುವು ಸಾಧಿಸಿಕೊಂಡಿದೆ.. ಈ ಮೂಲಕ ಮುಂಬೈ ಸೋಲಿನಿಂದ ಹೊರಬಂದಿದೆ. ಈಗಾಗಲೇ ಮೂರು ಮ್ಯಾಚ್ ಗಳನ್ನು ಗೆದ್ದಿರುವ ಸಿಎಸ್’ಕೆ ಗೆ ನಾಲ್ಕನೆ ಗೆಲುವು ಸಿಗದೆ ಇದ್ದಿದ್ದಕ್ಕೆ ಪಂದ್ಯಕ್ಕೆ ನಿರಾಸೆ ಉಂಟಾಗಿದೆ.
ಗೆಲುವಿಗೆ 171 ರನ್ ಟಾರ್ಗೆಟ್ ಪಡೆದ CSK ಮೊದಲ ಓವರ್‌ನಲ್ಲೇ ಆಘಾತ ಅನುಭವಿಸಿತು. ರಾಯುಡು ಶೂನ್ಯಕ್ಕೆ ಔಟಾದರು. ಶೇನ್ ವ್ಯಾಟ್ಸನ್ ಕೇವಲ 5 ರನ್ ಸಿಡಿಸಿ ಔಟಾದರು. 6 ರನ್‌ಗಳಿಗೆ 2 ವಿಕೆಚ್ ಕಳೆದುಕೊಂಡ CSK ಗೆ ಸುರೇಶ್ ರೈನಾ ಆಸರೆಯಾದರು. ಆದರೆ ರೈನಾ 26 ರನ್ ಸಿಡಿಸಿ, ಕೀರನ್ ಪೋಲಾರ್ಡ್ ಹಿಡಿದ ಅದ್ಬುತ ಕ್ಯಾಚ್‌ನಿಂದ ಪೆವಿಲಿಯನ್ ಸೇರಿಕೊಂಡರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಧೋನಿ 20 ಎಸೆತದಲ್ಲಿ 12 ರನ್ ಸಿಡಿಸಿ ಔಟಾದರು. 37 ರನ್ ಗೆಲುವು ಸಾಧಿಸಿದ ಮುಂಬೈ ತವರಿನಲ್ಲಿ ಬಲಿಷ್ಠ ತಂಡ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿತು. ಸಿಎಸ್’ಕೆ ಗೆಲುವಿಗೆ ಮುಂಬೈ ಇಂಡಿಯನ್ಸ್ ಬ್ರೇಕ್ ಆಗಿದೆ.. ಇದರಿಂದ ಧೋನಿ ಅಭಿಮಾನಿಗಳಿಗೆ ಕೊಂಚ ಬೇಸರ ಆಗಿದ್ದಂತೂ ನಿಜ…
Comments