ಮಹಿಳಾ ಕ್ರಿಕೆಟ್ ತಂಡದ ಮಾಜಿ ಕೋಚ್ ಅರೆಸ್ಟ್..!!!

ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕೋಚ್ ತುಷಾರ್ ಅರೋಥೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೊಂದಿಗೆ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿದ್ದ ಇನ್ನುಳಿದ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಪಡೋದರದ ಕೆಫೆಯೊಂದರಲ್ಲಿ ರೇಡ್ ನಡೆಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಅಲಕಪುರಿ ಎಂಬಲ್ಲಿನ ಕೆಫೆ ಸ್ಟಾಕ್ ಎಕ್ಸ್ ಚೇಂಜ್’ನಲ್ಲಿ ಈ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಸೋಮವಾರ ಪೊಲೀಸರಿಗೆ ಸಿಕ್ಕಿತು.
ಆ ಮೇರೆಗೆ ಅಂದು ರಾತ್ರಿ ಅಲ್ಲಿಗೆ ತೆರಳಿದಾಗ ದೊಡ್ಡ ಪರದೆ ಮೇಲೆ ಕ್ರಿಕೆಟ್ ಮ್ಯಾಚ್ ಪ್ರಸಾರವಾಗುತ್ತಿತ್ತು. ಪಕ್ಕದಲ್ಲಿದ್ದ ಶೆಟ್ ನಲ್ಲಿ ಒಂದಷ್ಟು ಜನ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ಕ್ರೈಮ್ ಬ್ರ್ಯಾಂಚ್ ಡಿಸಿಪಿ ಜಯದೀಪ್ ತಿಳಿಸಿದ್ದಾರೆ. ಅಲಕಪುರಿ ಎಂಬಲ್ಲಿನ ಕೆಫೆ ಸ್ಟಾಕ್ ಎಕ್ಸ್ ಚೇಂಜ್’ನಲ್ಲಿ ಈ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಸೋಮವಾರ ಸಿಕ್ಕಿತು. ದಾಳಿ ವೇಳೆ ಅಲ್ಲಿದ್ದವರ ಮೊಬೈಲ್ ಫೋನ್ ತೆಗೆದು ಪರಿಶೀಲಿಸಿದಾಗ ಆಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿರುವುದು ತಿಳಿದುಬಂದಿದೆ. ಬಂಧಿತರ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments