ಮುಂಬೈ ಇಂಡಿಯನ್ಸ್ ವಿರುದ್ದ ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್..!! ಆಕ್ರೋಶ ಹೊರಹಾಕಿದ ಕೊಹ್ಲಿ..!!!
ನೆನ್ನೆಯಷ್ಟೆ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯವು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ.. ಈ ಪಂದ್ಯದಲ್ಲಿ ಆರ್ ಸಿ ಬಿ ಕೇವಲ 5 ರನ್ ಗಳಿಂದ ಸೋಲನ್ನು ಕಂಡಿದೆ… ಮುಂಬೈ ಇಂಡಿಯನ್ಸ್ 187 ರನ್ ಗಳ ಗುರಿಯನ್ನು ಆರ್ ಸಿ ಬಿ ಗೆ ನೀಡಿತ್ತು.. ಆದರೆ ಆರ್ ಸಿ ಬಿ 181 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ಓವರ್ ಗಳನ್ನು ಕಳೆದುಕೊಂಡಿತು. 1 ನೋಬಾಲ್ ನಿಂದಾಗಿ ಆರ್.ಸಿ.ಬಿ. ಪಂದ್ಯ ಕಳೆದುಕೊಳ್ಳುವಂತಾಗಿತ್ತು ಎಂದಿದ್ದಾರೆ.
ಇದೀಗ ತಂಡದ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ. ಮುಂಬೈ ತಂಡ ನೀಡಿದ 187 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಆರ್.ಸಿ.ಬಿ.ಗೆ ಕೊನೆಯ ಓವರಿನಲ್ಲಿ 17 ರನ್ ಗಳಿಸುವ ಅವಶ್ಯಕತೆ ಇತ್ತು. ಮುಂಬೈ ಇಂಡಿಯನ್ಸ್ ಆಟಗಾರ ಲಸಿತ್ ಮಾಲಿಂಗ ಎಸೆದ ಕೊನೆಯ ಓವರ್ ನ ಮೊದಲ ಎಸೆತದಲ್ಲಿ ಶಿವಂ ದುಬೆ ಸಿಕ್ಸರ್ ಹೊಡೆದಿದ್ದರು. ನಂತರ 4 ಎಸೆತಗಳಲ್ಲಿ ಸಿಂಗಲ್ಸ್ ದಾಖಲಾಗಿ, ಕೊನೆಯ ಎಸೆತದಲ್ಲಿ ಪಂದ್ಯವನ್ನು ಟೈ ಮಾಡಲು 7 ರನ್ ಅವಶ್ಯಕತೆ ಇತ್ತು. ಕೊನೆಯ ಎಸೆತವನ್ನು ಲಸಿತ್ ಮಾಲಿಂಗ ನೋಬಾಲ್ ಹಾಕಿದ್ದರು ಕೂಡ ಅಂಪೈರ್ ನೋ ಬಾಲ್ ನೀಡಲಿಲ್ಲ.
ಇದರಿಂದಾಗಿ ಫ್ರೀ ಹಿಟ್ ನಿರಾಕರಿಸಲ್ಪಟ್ಟು, ಸಿಂಗಲ್ ರನ್ ಮಾತ್ರ ನಮ್ಮ ಪಾಲಿಗೆ ಸಿಕ್ಕಿತ್ತು. ಮುಂಬೈ ಇಂಡಿಯನ್ಸ್ 5 ರನ್ ಅಂತರದಿಂದ ಗೆಲುವು ಕಂಡಿದೆ. ಮಾಲಿಂಗ ಕೊನೆ ಎಸೆತದಲ್ಲಿ ನೋ ಬಾಲ್ ಹಾಕಿದ್ದು ಟಿವಿ ಸ್ಕ್ರೀನ್ ನಲ್ಲಿ ರಿಪ್ಲೇ ತೋರಿಸಿದಾಗ ಗೊತ್ತಾಗಿದ್ದು, ವಿರಾಟ್ ಕೊಹ್ಲಿ ಅಸಮಾಧಾನ ತೋರಿದ್ದಾರೆ. ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಆರ್ ಸಿ ಬಿ ಎರಡು ಮ್ಯಾಚ್ ಗಳನ್ನು ಸೋತಿದ್ದಾರೆ.. ಈ ಸಲ ಕಪ್ ನಮ್ದೆ ಎನ್ನುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯನ್ನು ಮೂಡಿಸಿದ್ದಾರೆ… ಕಳೆದ ಬಾರಿಯು ಕೂಡ ಕಪ್ ನಮ್ದೆ ಎನ್ನುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು.. ಈ ಬಾರಿಯೂ ಕೂಡ ಅಭಿಮಾನಿಗಳ ಆಸೆಯನ್ನು ಪೂರೈಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ
Comments