ಸರ್, ನೀವು ಲೋಕಸಭೆ ಚುನಾವಣೆಗೆ ನಿಲ್ಲಿ ಎಂದಿದ್ದಕ್ಕೆ ನಾನು ಹೇಳಿದ್ದು ಒಂದೇ ಮಾತು….!!!!

ಅಂದಹಾಗೇ ಈ ಬಾರಿ ಲೋಕಸಭೆ ಚುನಾವಣೆ ಭಾರೀಯೇ ಸದ್ದು ಮಾಡುತ್ತಿದೆ. ಇತ್ತ ರಾಜ್ಯ ರಾಜಕೀಯ ಮಾತ್ರ ಹಿಂದೆಂದಿಗಿಂತಲೂ ಹೆಚ್ಚು ಅಚ್ಚರಿ ಮೂಡಿಸಿದೆ. ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಭವಿಷ್ಯ ರಾಜಕಾರಣಕ್ಕೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಇದರ ಮದ್ಯೆ ಕೆಲ ಸಿನಿಮಾ ಸ್ಟಾರ್ ಗಳು ರಾಜಕೀಯ ಪಕ್ಷಗಳಿಗೆ ಸೇರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದರೇ, ಮತ್ತೊಂದಿಷ್ಟು ಮಂದಿ ಕ್ಯಾಂಪೇನ್ ಭರಾಟೆ ಆರಂಭಿಸಿದ್ದಾರೆ. ಈ ಸಲ ಚುನಾವಣೆಗೆ ನಿಲ್ತಾರೆ ಎಂದು ಕ್ರಿಕೆಟ್ ಸ್ಟಾರ್’ವೊಬ್ಬರ ಹೆಸರು ಹೆಚ್ಚು ಕೇಳಿ ಬರುತ್ತಿತ್ತು. ಆದರೆ ಅವರೇ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹೊಡಿ-ಬಡಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಈ ಬಾರಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು .ಆದರೆ ಈ ವಿಚಾರವಾಗಿ ಸೆಹ್ವಾಗ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ ನಾಯಕರು ಸೆಹ್ವಾಗ್ ಅವರನ್ನು ಭೇಟಿ ಮಾಡಿ ತಮ್ಮ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಸೆಹ್ವಾಗ್ ಅವರು ತಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ. ಸೆಹ್ವಾಗ್ ಅವರ ಜೊತೆ ಮತ್ತೊಬ್ಬ ಮಾಜಿ ಕ್ರಿಕೆಟಿಗ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಂಬ ಸುದ್ದಿಯೂ ಇತ್ತು. ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರು ದೆಹಲಿಯಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆಆದರೆ ಈ ಬಾರಿ ಲೋಕಸಭೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಸೆಹ್ವಾಗ್ ಕಳೆದುಕೊಂಡಂತಾಗುತ್ತದೆ. ಕ್ರಿಕೆಟ್ ನಿಂದ ನಿವೃತ್ತರಾದಗಿನಿಂದಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಬಿಜೆಪಿ ಮುಖಂಡರು ನನ್ನನ್ನು ಲೋಕಸಭೆ ಚುನಾವಣೆಗೆ ನಿಲ್ಲಿ, ನಮ್ಮ ಪಕ್ಷದಿಂದ ಟಿಕೆಟ್ ನೀಡುತ್ತೇವೆ ಎಂದು ಕೇಳಿಕೊಂಡು ಬಂದಾಗ ನಾನು ಹೇಳಿದ್ದು ಒಂದೇ ಮಾತು. ‘’ಯಾವ ಸರ್ಕಾರವಾದ್ರೂ ಒಳ್ಳೆ ಕೆಲಸಗಳನ್ನು ಮಾಡಿದ್ರೆ ಅದನ್ನು ಶ್ಲಾಘಿಸುವುದು, ಅಭಿನಂದಿಸುವುದು ಒಳ್ಳೆಯ ಗುಣ, ನಾನು ಹಾಗೇ ಮಾಡಿದ್ದೀನಿ. ನನಗೆ ರಾಜಕೀಯ ಆಸಕ್ತಿ ಇಲ್ಲ, ನಾನು ಯಾವ ಪಕ್ಷದ ಪರವಾಗಿಯೂ ಚುನಾವನೆಗೆ ನಿಲ್ಲಲ್ಲವೆಂದು’’ಟ್ವಿಟ್ಟರ್ ಖಾತೆ ಮೂಲಕ ರಾಜಕೀಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ಪರವಾಗಿ ಮಾತನಾಡುತ್ತಿದ್ದ ಸೆಹ್ವಾಗ್ ಬಿಜೆಪಿಯಿಂದ ಸ್ಪರ್ಧಿಸುತ್ತಾರೆಂಬ ಸುದ್ದಿಯಿತ್ತು. ಸದ್ಯ ಅದು ಸುಳ್ಳಾಗಿದೆ. ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಸೆಹ್ವಾಗ್, 'ಕೆಲವು ವಿಷಯಗಳು ಬದಲಾಗುವುದೇ ಇಲ್ಲ, ಇದೇ ಊಹಾಪೋಹ 2014ರಲ್ಲೂ ಹರಡಿತ್ತು, ಈಗ 2019ಕ್ಕೂ ಹರಡುತ್ತಿದೆ, ಆದರೆ ನನಗೆ ಆಗಲೂ ಆಸಕ್ತಿ ಇರಲಿಲ್ಲ, ಈಗಲೂ ಇಲ್ಲ' ಎಂದಿದ್ದಾರೆ
Comments