ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ಹಾಕಿದ ಆ ಒಂದು ಪೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಡಿಮ್ಯಾಂಡ್.....
ಅಂದಹಾಗೇ ಟೀಂ ಇಂಡಿಯಾ ನಾಯಕ, ನಟಿ ಅನುಷ್ಕಾಶರ್ಮಾ ಪತಿ ವಿರಾಟ್ ಕೊಹ್ಲಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಂದಹಾಗೇ ಆಸ್ಟ್ರೇಲಿಯಾ ವಿರುದ್ಧ ಆಡುವ ಏಕದಿನ ಪಂದ್ಯಕ್ಕಾಗಿ ದೆಹಲಿಗೆ ಬಂದಿದ್ದಾರೆ. ಕ್ರಿಕೆಟ್ನಲ್ಲಷ್ಟೇ ಅಲ್ಲಾ, ಸೋಶಿಯಲ್ ಮಿಡಿಯಾದಲ್ಲಿ ಭಾರೀ ಬಳಗದ ಫ್ಯಾನ್ ಫಾಲೋಯರ್ ಹೊಂದಿರುವ ಕೊಹ್ಲಿ ಇತ್ತೀಚೆಗೆ ಒಂದು ತಮ್ಮ ಖಾತೆ ಮೂಲಕ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಆ ಫೋಟೋ ನೋಡಿದ ಅಭಿಮಾನಿಗಳು ಭಾರೀ ಖುಷ್ ಆಗಿದ್ದಾರಂತೆ. ಆ ಫೋಟೋ ಅವರಿಗೆ ಭಾರೀ ಇಷ್ಟವಾಗಿದ್ಯಂತೆ. 13 ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಟ ನಡೆಯಲಿದೆ. ದೆಹಲಿಗೆ ಬರೋ ಮುನ್ನ ವಿರಾಟ್ ಕೊಹ್ಲಿ, ಫೋಟೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಸಾಕು ನಾಯಿ ಜೊತೆಗಿರುವ ಫೋಟೋವನ್ನು ಹಾಕಿ ನಾನು ಈಗ ದೆಹಲಿಗೆ ಬಂದೆ ಎಂದು ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಫೋಟೋ ಹಾಕಿದ 45 ನಿಮಿಷದಲ್ಲೇ 15 ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿದೆ. ಒಂದು ಸಾವಿರಕ್ಕೂ ಹೆಚ್ಚು ಬಾರಿ ರೀಟ್ವಿಟ್ ಮಾಡಲಾಗಿದೆ.
ಅಂದಹಾಗೇ ಮೊಹಾಲಿಯಲ್ಲಿ ಕೊಹ್ಲಿ ಕೇವಲ 7 ರನ್ ಗಳಿಸಿ ಔಟ್ ಆಗಿದ್ದರು. ರಾಂಚಿ ಏಕದಿನ ಪಂದ್ಯದಲ್ಲಿ ಕೊಹ್ಲಿ 123 ರನ್ ಗಳಿಸಿದ್ದರು. ನಾಗ್ಪುರ ಏಕದಿನ ಪಂದ್ಯದಲ್ಲಿ 116 ರನ್ ಗಳಿಸಿದ್ದರು. ಐದು ಏಕದಿನ ಪಂದ್ಯದ ಸರಣಿಯಲ್ಲಿ ಭಾರತ-ಆಸ್ಟ್ರೇಲಿಯಾ ಸಮಬಲ ಸಾಧಿಸಿದ್ದು, ಐದನೇ ಏಕದಿನ ಕುತೂಹಲ ಮೂಡಿಸಿದೆ.
Comments