ವಿರಾಟ್ ಕೊಹ್ಲಿ ರಿಯಲ್ ಹೀರೋ ಅಂದಿದ್ಯಾರಿಗೆ ಗೊತ್ತಾ..?
ಅಂತೂ ಇಂತೂ ಕೊನೆಗೂ ಭಾರತೀಯ ವಾಯುಪಡೆಯ ಕಮಾಂಡರ್ ಅಭಿನಂದನ್ ವರ್ಧಮಾನ್ ಭಾರತೀಯ ನೆಲವನ್ನು ಸ್ಪರ್ಶ ಮಾಡಿದ್ದಾರೆ.. ಪೈಲೆಟ್ ಅಭಿನಂದನ್ ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಆಗುವಂತೆ ಕೋಟ್ಯಾನು ಕೋಟಿ ಭಾರತೀಯರು ಪ್ರಾರ್ಥನೆ ಸಲ್ಲಿಸಿದ್ದಕ್ಕೂ ಕೊನೆಗೂ ಫಲ ಸಿಕ್ಕಿದೆ... ಪಾಪಿ ಪಾಕ್ ನೆಲದಲ್ಲಿ ಧೈರ್ಯವಾಗಿ ಸೆರೆಸಿಕ್ಕ ಅಭಿನಂದನ್ ವಾಪಸ್ ಬರುವುದರ ಬಗ್ಗೆ ಅನುಮಾನಗಳು ಮೂಡಿದ್ದಂತೂ ಸುಳ್ಳಲ್ಲ... ಪಾಕಿಸ್ತಾನಕ್ಕೆ ಸೆರೆಸಿಕ್ಕ ವಿಂಗ್ ಕಮಾಂಡರ್ ಅಭಿನಂದನ್ ಅವರ ಬರುವಿಕೆಗಾಗಿ ಶುಕ್ರವಾರ ದಿನವಿಡೀ ಇಡೀ ದೇಶವೇ ಕಣ್ಣು ಬಿಟ್ಟುಕೊಂಡು ಅವರಿಗೆ ಜೈಕಾರ ಹಾಕಿಕೊಂಡು ಕಾಯುತ್ತಿತ್ತು..
ಇನ್ನೂ ಇದೇ ಸಮಯದಲ್ಲಿ ಎಲ್ಲಾ ಕ್ಷೇತ್ರದವರು ಅವರ ಪರವಾಗಿ ಪ್ರಾರ್ಥನೆಯನ್ನು ಮಾಡಿಕೊಂಡಿದ್ದರು… ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅದೇ ರೀತಿಯ ಸಂದೇಶವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. real hero. i bow down to you. jay hind ಎಂದು ಭಾವನಾತ್ಮಕವಾಗಿ ಸಂದೇಶ ಪ್ರಕಟಿಸಿರುವ ವಿರಾಟ್ ಕೊಹ್ಲಿ ತಮ್ಮ ಮನಸ್ಸಿನ ಮಾತುಗಳನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಹೀರೋ ಎನಿಸಿಕೊಂಡ ಕೊಹ್ಲಿ, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಹೀರೋ ಎಂದು ಕರೆದಿದ್ದಾರೆ. ಅಲ್ಲದೆ ನಾನು ನಿಮಗೆ ಭಾಗಿ ನಮನವನ್ನು ಸಲ್ಲಿಸುತ್ತೇನೆ…ಎಂದು ತಮ್ಮ ದೇಶಾಭಿಮಾನವನ್ನು ಪ್ರಕಟಿಸಿದ್ದಾರೆ. ಸಾಕಷ್ಟು ಸಿನಿಮಾ ಗಣ್ಯರು, ಕ್ರಿಕೆಟ್ ಗಣ್ಯರು ಈ ವಿಚಾರವಾಗಿ ಟ್ವೀಟ್ ಮೂಲಕ ಅಭಿನಂದನ್ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Comments