ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ : ಧೋನಿಗೆ ಇದು ಕೊನೆ ಆಟನಾ…?!!!
ನಿನ್ನೆ ಟಿ-20 ಮ್ಯಾಚ್ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಆಸ್ಟ್ರೇಲಿಯಾ ಜೊತೆ ಟೀಂ ಇಂಡಿಯಾ ಸೋತಿದೆ. ಈ ಸೋಲಿನ ಹತಾಶೆಯಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸುಳಿವು ಸಿಕ್ಕಿದ್ಯಂತೆ. ನಿನ್ನೆ ನಡೆದ ಪಂದ್ಯ ದಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ ಅವರ ಅಂತರಾಷ್ಟ್ರೀಯ ಟಿ-20 ಪಂದ್ಯ ಕೊನೆ ಆಗಬಹುದು ಅನ್ನೋ ಬಿಸಿಬಿಸಿ ಚರ್ಚೆ ಶುರುವಾಗಿದೆ. ಅದೇಗೇ ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನಾಗಿಯೇ ಆಡಿದ್ದಾರೆ ಅಂತೀರಾ..?
ಧೋನಿ ನಿನ್ನೆ ನಡೆದ ಆಟದಲ್ಲಿ ಭಾರೀ ಫ್ಲೆಕ್ಸಿಬಲ್ ಆಗಿಯೇ ಆಡಿದ್ದಾರೆ. ಧೋನಿಯನ್ನು ದಾಖಲೆಗಳ ಸರದಾರ ಅಂತಾನೇ ಕರೆಯುತ್ತಾರೆ ಕ್ರಿಕೆಟ್ ಪ್ರೇಮಿಗಳು. ನಿನ್ನೆ ನಡೆದ ಪಂದ್ಯದಲ್ಲಿ 23 ಬಾಲ್ ಗಳಿಗೆ 40 ರನ್ ಸಿಡಿಸಿ ಅಭಿಮಾನಿಗಳ ಖುಷಿ ಹೆಚ್ಚಿಸಿದ್ರು. ಆದರೂ ಕ್ರಿಕೆಟ್ ಅಭಿಮಾನಿಗಳು ಇದು ಧೋನಿ ಅವರ ಕೊನೆಯಾಟವಾಗಬಹುದು ಅಂತಾ ಯೋಚಿಸ್ತಾ ಇದ್ದಾರೆ. ಮಹೇಂದ್ರ ಸಿಂಗ್ ಧೋನಿಗೆ 37 ವರ್ಷ ವಯಸ್ಸು. ಮುಂಬರುವ 2019 ರ ಏಕದಿನ ವಿಶ್ವಕಪ್ ಆಡೋದು ಧೋನಿಯ ಹೆಬ್ಬಯಕೆ. ಈಗಾಗಲೇ ಟೆಸ್ಟ್ ಕ್ರಿಕೆಟ್ ಗೆ ರಾಜೀನಾಮೆ ನೀಡಿರುವ ಧೋನಿ, ವಿಶ್ವಕಪ್ ಬಳಿಕ ಏಕದಿನ ಹಾಗೂ ಟಿ-20ಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ವಿಶ್ವಕಪ್ ತನಕ ಭಾರತ ಯಾವುದೇ ಟಿ-20 ಪಂದ್ಯ ಆಡುವುದಿಲ್ಲ. ಹೀಗಾಗಿ ಧೋನಿಗೆ ನಿನ್ನೆಯ ಮ್ಯಾಚ್ ಕೊನೆಯ ಟಿ-20 ಇಂಟರ್ನ್ಯಾಷನಲ್ ಪಂದ್ಯ ಆದ್ರೂ ಅಚ್ಚರಿಯಲ್ಲ.
Comments