ಟಿ-20 ಆಡುವ ಮುನ್ನವೇ ಟೀಂ ಇಂಡಿಯಾಗೆ ಆಘಾತ : ತಂಡದಿಂದ ಹೊರ ನಡೆದ ಸ್ಟಾರ್ ಆಟಗಾರ...!!!

ಆಸ್ಟ್ರೇಲಿಯಾ ವಿರುದ್ಧದ ಟಿ -20 ಹಾಗೂ ಏಕದಿನ ಸರಣಿಗೆ ಟೀಂ ಇಂಡಿಯಾ ಈಗಾಗಲೇ ಸಜ್ಜು ಮಾಡಿಕೊಂಡಿದೆ. ಆಟಗಾರರು ಕೂಡ ತರಬೇತಿ ಆರಂಭಿಸಿದ್ದಾರೆ. ಆಟಕ್ಕೆ ಇನ್ನು ಮೂರು ದಿನ ಇರುವಾಗಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಟೀಂ ಇಂಡಿಯಾದಿಂದ ಸ್ಟಾರ್ ಆಟಗಾರವೊಬ್ಬರು ಹೊರಬಿದ್ದಿದ್ದಾರೆ. ಅಂದಹಾಗೇ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ನಿಂದ ಹೊರ ನಡೆದಿದ್ದಾರೆ.
ಟಿ-20 ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದಾರೆ. ಹಾರ್ದಿಕ್ ಪಾಂಡ್ಯಾ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದು ಸರಣಿಯಲ್ಲಿ ಆಡುತ್ತಿಲ್ಲವೆಂಬುದು ಸ್ಪಷ್ಟವಾಗಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ ಅವರನ್ನು ತಪಾಸಣೆ ನಡೆಸಿರುವ ಟೀಂ ಇಂಡಿಯಾದ ವೈದ್ಯರು ಅವರಿಗೆ ರೆಸ್ಟ್ ತೆಗೆದುಕೊಳ್ಳಲು, ಆಗ ಈ ಬಾರಿ ಆಟ ಆಡದಂತೇ ಹೇಳಿದ್ದಾರೆ ಎಂಬುದು ಬಲ್ಲ ಮೂಲಗಳು ತಿಳಿಸಿವೆ.
ಹೀಗಾಗಿ ಸ್ಟಾರ್ ಆಟಗಾರ ಪಾಂಡ್ಯ ಟಿ20 ಹಾಗೂ ಏಕದಿನ ಸರಣಿಯಿಂದ ಹೊರಬಿದಿದ್ದಾರೆ. ಇದೀಗ ಹಾರ್ದಿಕ್ ಬದಲು ತಂಡಕ್ಕೆ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ.ಬರಲಿರುವ 2019 ರ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಟೀಂ ಇಂಡಿಯಾ ಕ್ರಿಕೆಟಿಗರ ಪಾಲಿಗೆ ಬಹು ಮುಖ್ಯವಾಗಿದೆ.ಾಸಿಸ್ ಸರಣಿಯಲ್ಲಿ ಮಿಂಚಿದ ಕ್ರಿಕೆಟಿಗರು ವಿಶ್ವಕಪ್ ಟೂರ್ನಿಗೂ ಆಯ್ಯೆಯಾಗಿದ್ದಾರೆ. ಇದೀಗ ರವೀಂದ್ರ ಜಡೇಜಾ ವಿಶ್ವಕಪ್ ತಂಡದ ಾಯ್ಕೆ ಆಸೆ ಜೀವಂತವಾಗಿದ್ದರೆ, ಹಾರ್ದಿಕ್ ಪಾಂಡ್ಯಾಗೆ ಇಂಜುರಿ ಸಮಸ್ಯೆ ಅಡ್ಡವಾಗಲಿದೆ.
Comments