ಭಾರತ-ಪಾಕ್ ನಡುವೆ ನಡೆಯಲಿದೆ 'ಹೈ ವೋಲ್ಟೇಜ್' ಮ್ಯಾಚ್..!! ಪಾಪಿ ಪಾಕ್’ಗೆ ತಕ್ಕ ಪಾಠ ಕಲಿಸುತ್ತಾ ಟೀಂ ಇಂಡಿಯಾ..!!

ಇತ್ತಿಚಿಗಷ್ಟೆ ಪುಲ್ವಾಮ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಬೇಕು ಎಂದು ಹೇಳುತ್ತಿರುವ ಸಮಯದಲ್ಲಿಯೇ ಕ್ರಿಕೆಟ್ ನಡೆಯಲಿದೆ.. ದಾಳಿ ಆದ ನಂತರ ಸಾಕಷ್ಟು ವೀರ ಯೋಧರು ವೀರ ಮರಣವನ್ನು ಅಪ್ಪಿದರು.. ಅಷ್ಟೆ ಅಲ್ಲದೆ ಆ ಸಮಯದಲ್ಲಿ ಪಾಕ್ ಆಟಗಾರರಿಗೆ ಸಿನಿಮಾಸ್ಟಾರ್’ಗಳನ್ನು ಬ್ಯಾನ್ ಮಾಡಬೇಕು ಎಂಬ ಮಾತು ಕೂಡ ಕೇಳಿ ಬರುತ್ತಿತ್ತು.. ಈಗಾಗಲೇ ಪಾಕ್ ಆಟಗಾರರ ಫೋಟೋಗಳಿಗೆ ಗೇಟ್ ಪಾಸ್ ನೀಡಲಾಗಿದೆ.ಆದರೆ, ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ-ಪಾಕ್ ನಡುವಿನ ಪಂದ್ಯವನ್ನು ರದ್ದು ಮಾಡುವುದಿಲ್ಲ ಎಂದು ಐಸಿಸಿ ತಿಳಿಸಿದೆ.. ವಿಶ್ವಕಪ್ ಕ್ರಿಕೆಟ್ ಪಂದ್ಯ ರದ್ದುಗೊಳಿಸುವ ಯಾವುದೇ ಕಾರಣವಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ ಈಗಾಗಲೇ ಸ್ಪಷ್ಟನೆ ನೀಡಲಾಗಿದೆ.
ಇದರಿಂದಾಗಿ ನಿಗದಿಯಾಗಿರುವಂತೆಯೇ ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಪಾಕಿಸ್ತಾನದೊಂದಿಗಿನ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಐಸಿಸಿ ತಿಳಿಸಿದೆ. ಇದರಿಂದಾಗಿ ಜೂನ್ 16 ರಂದು ಮ್ಯಾಂಚೆಸ್ಟರ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈ ವೋಲ್ಟೇಜ್ ಮ್ಯಾಚ್ ನಡೆಯುವುದು ಪಕ್ಕಾ ಆಗಿದೆ. ಯೋಧರ ಸಾವಿಗೆ ಕಾರಣವಾಗಿರುವ ಪಾಕಿಸ್ತಾನವನ್ನು ಸೋಲಿಸಲು ಟೀಂ ಇಂಡಿಯಾ ಪಣ ತೊಟ್ಟಿದ್ದಾರೆ.. ಎಷ್ಟೆ ಕಷ್ಟ ಆದರೂ ಪರವಾಗಿಲ್ಲ ಪಾಪಿ ಪಾಕಿಸ್ತಾನವನ್ನು ಬಗ್ಗು ಬಡಿಯಲೇಬೇಕು ಎಂದಿದ್ದಾರೆ..
Comments