ಖ್ಯಾತ ಕ್ರಿಕೆಟರ್ ಸುರೇಶ್ ರೈನಾ ಇನ್ನಿಲ್ಲ..!? ಮೌನ ಮುರಿದ ಎಡಗೈ ಆಟಗಾರ..!!!

"ಕಳೆದ ಕೆಲವು ದಿನಗಳಿಂದ ಕಾರು ಅಪಘಾತದಲ್ಲಿ ಸುರೇಶ್ ರೈನಾ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇದರಿಂದ ನನ್ನ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ನೋವುಂಟಾಗಿದೆ" ಎಂದು ಸುರೇಶ್ ರೈನಾ ತಿಳಿಸಿದ್ದಾರೆ.. "ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ..", "ಭೀಕರ ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ", "ಕ್ರಿಕೆಟ್ ಜಗತ್ತಿಗೆ ರಕ್ತದ ಮೂಲಕ ಗುಡ್ಬೈ ಹೇಳಿದ ಎಡಗೈ ದಾಂಡಿಗ", "ಭಾರತದ ದೊಡ್ಡ ಕ್ರಿಕೆಟಿಗನಿಗೆ ಕಾರು ಅಪಘಾತ, ಸಾವು ಬದುಕಿನ ಮದ್ಯೆ ಹೋರಾಟ". ಈ ರೀತಿಯ ಹೆಡ್ಲೈನ್ಗಳ ಮೂಲಕ ನಾಲ್ಕೈದು ದಿನಗಳಿಂದ ಸುರೇಶ್ ರೈನಾ ಸಾವನ್ನಪ್ಪಿರುವ ಸುದ್ದಿಗಳು ಕೇಳಿ ಬರುತ್ತಿದ್ದವು. ಆದರೆ ಇದೀಗ ಆ ಸುದ್ದಿಗೆ ಫುಲ್ ಸ್ಟಾಫ್ ಇಟ್ಟಿದ್ದಾರೆ.
ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷಾ ಯೂಟ್ಯೂಬ್ ಚಾನೆಲ್ನಿಂದ ಆರಂಭವಾದ ಈ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ರೈನಾಗೆ ಶ್ರದ್ಧಾಂಜಲಿ ಅರ್ಪಿಸುವಷ್ಟರ ಮಟ್ಟಿಗೆ ಬಂದು ನಿಂತಿದೆ. ಈ ಸುಳ್ಳು ಸುದ್ದಿ ವೈರಲ್ ಆಗುತ್ತಿದ್ದಂತೆ ಖುದ್ದು ಸುರೇಶ್ ರೈನಾ ಟ್ವೀಟ್ ಮೂಲಕ ಎಲ್ಲರಿಗೂ ಕೂಡ ಉತ್ತರ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಕಾರು ಅಪಘಾತದಲ್ಲಿ ನಾನು ಸಾವನ್ನಪ್ಪಿರುವೆ ಎಂಬ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರಿಂದ ನನ್ನ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ನೋವುಂಟಾಗಿದೆ. ಇಂತಹ ಸುಳ್ಳು ಸುದ್ದಿಯನ್ನು ಯಾರು ನಂಬಬೇಡಿ, ಇವುಗಳಿಂದ ದೂರವಿರಿ. ದೇವರ ದಯೆಯಿಂದ ನಾನು ಆರೋಗ್ಯವಾಗಿರುವೆ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿರುವ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುವುದಾಗಿ ರೈನಾ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
Comments