ಭಾರತಕ್ಕೆ ಹೀನಾಯ ಸೋಲು: 80 ರನ್‍ಗಳಿಂದ ಗೆದ್ದ ಕಿವೀಸ್ ತಂಡ
ಭಾರತದ ವಿರುದ್ಧ ನಡೆದ ಮೊದಲ ಟಿ 20 ಪಂದ್ಯವನ್ನು 80 ರನ್‍ಗಳಿಂದ ನ್ಯೂಜಿಲ್ಯಾಂಡ್ ಗೆದ್ದುಕೊಂಡಿದೆ.. 220ರನ್’ಗಳ ಬೃಹತ್ ರನ್ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾಗೆ 19.2 ಓವರ್ ಗಳಲ್ಲಿ ಕೇವಲ 139 ರನ್ ಗಳಿಸಿ ಆಲೌಟ್ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೂಡ ಉತ್ತಮ ಪ್ರದರ್ಶನ ನೀಡಿದ ಕಿವೀಸ್ ತಂಡ ವಿಜಯವನ್ನು ಸಾಧಿಸಿದೆ.. ಈ ಮೂಲಕ 3 ಪಂದ್ಯಗಳ ಟೂರ್ನಿಯಲ್ಲಿ 1-0 ಮುನ್ನಡೆ ಪಡೆಯಿತು. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕ ಜವಾಬ್ದಾರಿ ವಹಿಸಿದ ರೋಹಿತ್ ಶರ್ಮಾ 1 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ತಂಡದ ಪರ ಆರಂಭಿಕ ಧವನ್ 29 ರನ್, ಧೋನಿ 39 ರನ್, ಕೃಣಾಲ್ ಪಾಂಡ್ಯ 20 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಹೆಚ್ಚು ರನ್ ಗಳನ್ನು ಸಂಪಾದಿಸಿಯೇ ಇಲ್ಲ.. ಕಿವೀಸ್ ಪರ ಸೌಥಿ 3 ವಿಕೆಟ್ ಪಡೆದರೆ, ಸೋಧಿ, ಫಗ್ರ್ಯೂಸನ್, ಸ್ಯಾಂಟ್ನಾರ್ ತಲಾ 2 ಹಾಗೂ ಮಿಚೆಲ್ 1 ವಿಕೆಟ್ ಅನ್ನು ಪಡೆದರು.. ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ಕಿವೀಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತ್ತು… ಕಿವೀಸ್ ತಂಡದ ವಿಕೆಟ್ ಕೀಪರ್ ಸಿಫರ್ಟ್ ಸ್ಫೋಟಕ ಪ್ರದರ್ಶನ ನೀಡಿ ಕೇವಲ 43 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರು. ಅಲ್ಲದೇ ಮನ್ರೋ ಹಾಗೂ ನಾಯಕ ವಿಲಿಯಮ್ಸನ್ ತಲಾ 34 ರನ್ ಜವಾಬ್ದಾರಿಯುತ ಆಟದಿಂದ ಕಿವೀಸ್ ತಂಡ ನಿಗಧಿತ 20 ಓವರ್ ಗಳಲ್ಲಿ 219 ರನ್ ಸಿಡಿಸಿತ್ತು. ಒಟ್ಟಾರೆಯಾಗಿ ಭಾರತಕ್ಕೆ ಟಿ20 ಇತಿಹಾಸದಲ್ಲಿ ಹೀನಾಯ ಸೋಲು ಇದಾಗಿತ್ತು ಎಂದರೆ ತಪ್ಪಾಗುವುದಿಲ್ಲ,,, ಕೊಹ್ಲಿಯ ಅನುಪಸ್ಥಿತಿಯಲ್ಲಿ ತಂಡ ಸೋತಿರುವುದನ್ನು ನಿಜಕ್ಕೂ ಬೇಸರದ ಸಂಗತಿಯೇ ಸರಿ.
Comments