ಭಾರತ ತಂಡದ ಅಂಬಾಟಿ ರಾಯುಡುಗೆ ಬೌಲಿಂಗ್ ಮಾಡದಂತೆ ಐಸಿಸಿ ನಿರ್ಬಂಧ..?

ಭಾರತ ತಂಡದ ಅಂಬಾಟಿ ರಾಯುಡುಗೆ ಐಸಿಸಿ ಬೌಲಿಂಗ್ ಮಾಡದಂತೆ ತಾಕೀತು ಮಾಡಿದೆ.ಅನುಮಾನಸ್ವದ ಬೌಲಿಂಗ್ ಆರೋಪಕ್ಕೆ ಗುರಿಯಾಗಿರುವ ಅಂಬಾಟಿ ರಾಯುಡು ಸದ್ಯ ಆರೋಪಕ್ಕೆ ಗುರಿಯಾಗಿದ್ದಾರೆ.. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು ಬೌಲಿಂಗ್ ಅನುಮಾನಸ್ಪದ ಬೌಲಿಂಗ್ ಆರೋಪಕ್ಕೆ ಗುರಿಯಾಗಿತ್ತು.
ಅಂಬಾಟಿ ರಾಯುಡು ಬೌಲಿಂಗ್ ಶೈಲಿ ಅನುಮಾನ ಮೂಡಿಸಿದ್ದ ಕಾರಣ ಐಸಿಸಿ 14 ದಿನದೊಳಗೆ ಪರೀಕ್ಷೆಗೆ ಒಳಪಡುವಂತೆ ತಾಕೀತು ಮಾಡಿತ್ತು.. ಆದರೆ ಸತತ ಸರಣಿಯಿದ್ದ ಕಾರಣದಿಂದಾಗಿ ಅಂಬಾಟಿ ರಾಯುಡು ಪರೀಕ್ಷೆಗೆ ಒಳಪಟ್ಟಿರಲಿಲ್ಲ. ಹೀಗಾಗಿ ರಾಯುಡುಗೆ ಬೌಲಿಂಗ್ ಮಾಡದಂತೆ ಐಸಿಸಿ ಇದೀಗ ನಿರ್ಬಂಧ ಹೇರಿದೆ. ಸಿಡ್ನಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು 2 ಓವರ್ ಬೌಲಿಂಗ್ ಮಾಡಿದ್ದರು. ಅವರ ಬೌಲಿಂಗ್ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಪಂದ್ಯದ ಅಧಿಕಾರಿಗಳು, ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ವರದಿಯನ್ನು ಕೂಡ ಮಾಡಿದ್ದಾರೆ. ಈ ಕಾರಣಕ್ಕಾಗಿ ಐಸಿಸಿ ಅಂಬಾಟಿ ರಾಯುಡುಗೆ ಐಸಿಸಿ ಬೌಲಿಂಗ್ ಮಾಡದಂತೆ ತಾಕೀತು ಮಾಡಿದೆ.
Comments