'ನನ್ನಆಸೆಗೆ ತಣ್ಣೀರೆರಚಿದ್ದು ಅವರೇ'...ಅಳಲು ತೋಡಿಕೊಂಡ ಪಾಕ್ ಕ್ರಿಕೆಟಿಗ!!!

2010ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿ ನಿಷೇಧಕ್ಕೊಳಗಾಗಿದ್ದ ಕ್ರಿಕೆಟಿಗ ಸಲ್ಮಾನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದರು. ಆದರೆ 2015ರಲ್ಲಿ ನಿಷೇಧ ಅವಧಿ ಮುಕ್ತಾಯಗೊಂಡ ಬಳಿಕ ದೇಸಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದರು. ಆ ಆಟಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ 2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅಭಿಮಾನಿಗಳು ಕೂಡ ಸಲ್ಮಾನ್ನನ್ನು ಮತ್ತೆ ಕ್ರಿಕೆಟ್ ತಂಡದಲ್ಲಿ ನೋಡುವ ಆಸೆ ಇಟ್ಟುಕೊಂಡಿದ್ದರು, ಆದರೆ ಅವರ ಆಸೆ ಈಡೇರಲಿಲ್ಲ.
'ಕೋಚ್ ವಖಾರ್ ಯೂನಿಸ್, ನನ್ನನ್ನು ಕರೆದು ಫಿಟ್ನೆಸ್ ಟೆಸ್ಟ್ ನಡೆಸಿ ತಂಡಕ್ಕೆ ಆಯ್ಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ನಾಯಕ ಅಫ್ರಿದಿ ನನ್ನ ಆಯ್ಕೆಗೆ ಒಪ್ಪಲಿಲ್ಲ' ಎಂದು ಸಲ್ಮಾನ್, ಆಫ್ರಿದಿ ಮೇಲೆ ಗಂಭೀರವಾಗಿ ಆರೋಪಿಸಿದ್ದಾರೆ.ಭಾರತದಲ್ಲಿ 2016ರಲ್ಲಿ ನಡೆದ ಟಿ20 ವಿಶ್ವಕಪ್'ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಪಾಕ್ ಸೆಮೀಸ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ನಾಯಕ ಅಫ್ರಿದಿ ಹಾಗೂ ಕೋಚ್ ವಕಾರ್ ಯೂನಿಸ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದರು. ನನ್ನ ಆಸೆಗೆ ತಣ್ಣೀರೆರಚಿದ್ದು ಆಫ್ರಿದಿ. ಅವರು ಪಾಕ್ ತಂಡಕ್ಕೆ ಆಯ್ಕೆಯಾಗಲು ನನ್ನನ್ನು ಒಪ್ಪಿಕೊಳ್ಳಲಿಲ್ಲ. ಅವರಿಂದ ನಾನು ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ ಎಂಬ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
Comments