ಲ್ಯುಕೇಮಿಯಾ ಖಾಯಿಲೆ ಹಿನ್ನಲೆ: WWE ಚಾಂಪಿಯನ್ ಪಟ್ಟ ತ್ಯಜಿಸಿದ ರೋಮನ್ ರೈನ್ಸ್

WWE ಅಂದರೆ ಈಗಲೂ ಸಹ ಜನ ಟಿವಿ ಮುಂದೆ ಕೂತರೆ ಎದ್ದೇಳುವುದು ಸ್ವಲ್ಪ ಕಷ್ಟವೇ ಸರಿ…ಅಷ್ಟರ ಮಟ್ಟಿಗೆ WWE ಯನ್ನು ಜನ ನೋಡುತ್ತಾರೆ. ಅದಕ್ಕೆ ಅದರದೆ ಆದ ಅಭಿಮಾನಿಗಳು ಇದ್ದಾರೆ.. ಅವರ ಹಾವ ಭಾವ ಸ್ಟೈಲ್ ಎಲ್ಲವನ್ನು ಅಭಿಮಾನಿಗಳು ಫಾಲೋ ಮಾಡ್ತಾರೆ.. WWE ಚಾಂಪಿಯನ್ ಶಿಪ್ ಅನ್ನು ಪಡೆದುಕೊಂಡಿದ್ದ ಅಮೇರಿಕಾದ ವೃತ್ತಿಪರ ಕುಸ್ತಿ ಪಟುವಾದ ರೋಮನ್ ರೈನ್ಸ್ ಅವರು ತಮ್ಮ ಚಾಂಪಿಯನ್ ಶಿಪ್ ಅನ್ನು ಬಿಟ್ಟು ಕೊಟ್ಟಿದ್ದಾರೆ.
ಅಮೆರಿಕದ ವೃತ್ತಿಪರ ಕುಸ್ತಿಪಟು ರೋಮನ್ ರೈನ್ಸ್ ಲ್ಯುಕೇಮಿಯಾ (ರಕ್ತ ಕ್ಯಾನ್ಸರ್) ದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಹನ್ನೊಂದು ವರ್ಷಗಳಿಂದಲೂ ಕೂಡ ಈ ರೋಗದಿಂದ ಬಳಲುತ್ತಿದ್ದೇನೆ. ಈ ಕಾರಣದಿಂದ ಡಬ್ಲ್ಯುಡಬ್ಲ್ಯುಇನಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ ಎಂದು ರೋಮನ್ ತಿಳಿಸಿದ್ದಾರೆ."ಹನ್ನೊಂದು ವರ್ಷಗಳಿಂದ ಲ್ಯುಕೇಮಿಯಾ ನನ್ನ ಜೊತೆ ಇದೆ.. ಅದು ಮತ್ತೆ ನನ್ನನ್ನು ಹಿಂಬಾಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಚಾಂಪಿಯನ್‍ಶಿಪ್ ಬಿಟ್ಟು ಕೊಡುತ್ತಿದ್ದೇನೆ ಎಂದು " ಎಂದು ಸ್ಪಷ್ಟಪಡಿಸಿದ್ದಾರೆ.
Comments